Friday, September 29, 2017

ಓ ಮೇಘಮಾಲೆ ತಲಪಿಸು ಒಲವ ಸಂದೇಶವ ನನ್ನವಳಿಗೀಗಲೇ ಪಡುವಣದ ಬಾನಿನಲ್ಲಿ ಮೇಳೃಸಿದ ಮೋಡಗಳೇ ನನ್ನೊಲವ ಮಳೆಯಾಗಿ ಸುರಿಯಿರಿ ಅವಳೊಡಲಲ್ಲಿ ಮಳೆಬಿಲ್ಲಿನ ಮಧುರಾನುಭೂತಿ ಅವಳ ಮನಕೆ ನೀ ನೀಡು ಮಳೆ ಬಿಟ್ಟರೂ ಮರದ್ಹನಿ ಬಿಡದು ಓ ಮಳೆಯೇ ನೀನವಳಿಗೆ ನೆನಪಾಗಿ ಕಾಡು ಭಾವದೊರತೆ ತುಂಬಿ ತುಳುಕಲಿ ಅವಳ ನಗೆಗಡಲಿನೊಳಗೆ ನೋವನೆಲ್ಲ ಮರೆಸಿ ಚಿಂತೆ ದೂಡು ಬರಬಂದು ನೋಯಬಾರದು ಬಾಳೊಳಗೆ ನೆನಪುಗಳು ಸದಾ ಹಸಿರಾಗಿರಲಿ ಪ್ರೀತಿಯು ಅಲ್ಲಿ ಮಂಜಾಗಿ ಹೊಳೆಯಲಿ ಅವಳ ಹುಸಿಮೌನ ಬಿಸಿಯೇರುವ ಮುನ್ನ ಸುರಿದು ತಣಿದುಬಿಡಲಿ ಬಾಳೊಡಲು ಮತ್ತೆ ಮುಂಗಾರು ಮೈದಳೆದು ಮಳೆಯದು ಹೊಳೆಯಾಗಿ ಹರಿಯಲಿ ಹದವಾಗಿ ನೆನೆದ ನನ್ನವಳ ಬದುಕು ಶ್ರಾವಣದ ಸಂಜೆ ಸಂಭ್ರಮದ ಮೆರುಗಾಗಲಿ 0113ಎಎಂ28082017 *ಅಮುಭಾವಜೀವಿ*

No comments:

Post a Comment