Tuesday, September 12, 2017

*೨•ಅನಾಥ ಬದುಕಿಗೆ* ಅಪ್ಪ ಮರೆತಿರಲು ಅಮ್ಮ ತೊರೆದಿರಲು ಯಾರ ಬೇಡಲಿ ಕೈತ್ತುತ್ತು ಬೀದಿ ಬದಿಯೇ ವಾಸ ಅವರಿವರ ಆ ಸಂತೋಷ ಎಂದೂ ಆಗದು ನಮ್ಮ ಸ್ವತ್ತು // ಅನಾಥ ಬದುಕಿಗೆ ಅವಹೇಳನವೇ ಉಡುಗೊರೆ ಪ್ರೀತಿ ತೋರರು ಯಾರೂ,,,? ಮೋರಿ ಸೇರಿದ ಅನ್ನಕೆ ನೂರು ಜೀವಗಳ ಹಂಬಲಿಕೆ ಎಸೆವ ಕೈ ಹಸಿವ ನೀಗದು ,,,! ಭಿಕ್ಷೆ ಬೇಡಿದರೆ ಶಿಕ್ಷೆ ನೀಡುವರು ಹೆತ್ತವರ ಪ್ರೀತಿಯುಂಡವರು,,,,! ಪ್ರಾಣಿಗೂ ಹೀನ ಬದುಕು ಅಲ್ಲಿಯೇ ನಮ್ಮ ಒಳಿತು ಕೆಡುಕು ಕೈತ್ತುತ್ತು ಕನಸಿನ ಮಾತಾಗಿಹುದು. .. 1159ಎಎಂ12092017 *ಅಮುಭಾವಜೀವಿ*

No comments:

Post a Comment