ತಲ್ಲಣಗಳು ತಳಮಳಿಸುತ್ತಿವೆ
ಕಾರಣಗಳು ತಿಳಿಯದೇ
ಮನ ನೊಂದಿದೆ ತನು ಬೆಂದಿದೆ
ಎಂದಿಗೆ ಕೊನೆ ಎಂದು ತಿಳಿಯದೆ
ಬರದ ಛಾಯೆ ಆವರಿಸಿದೆ
ಬದುಕಲು ಹೋರಾಟ ನಿತ್ಯವಾಗಿದೆ
ಕಲ್ಲು ಕೂಡ ಕರಗವ ಆಕ್ರಂದನಕೆ
ನ್ಯಾಯ ಮಾತ್ರ ಮರೀಚಿಕೆಯಾಗದೆ
ವಾದಗಳ ಭಿನ್ನತೆಯಲಿ
ಬದುಕುವ ಸಾಮ್ಯತೆ ಬಲಿಯಾಗಿ
ಸತ್ಯದ ಹತ್ಯೆಯಾಗುತಿದೆ
ಸಮಾಜದ ಸ್ವಾಸ್ಥ್ಯ ಹಾಳಾಗಿ
ವಿಚಾರಧಾರೆಯನು ಹೇಳಲೂ
ಇಲ್ಲಿ ಸ್ವಾತಂತ್ರ್ಯ ಇಲ್ಲವಾಗುತಿದೆ
ಅಂಜದೆ ಬಾಯಿ ಬಿಟ್ಟರೆ
ಗುಂಡು ಸದ್ದು ಮಾಡಿ ಸಾವು ತರುತಿದೆ
ಕಾಯಕ ಮಾಡುವುದೆ ಕಷ್ಟವಾಗಿ
ಭ್ರಷ್ಟ ವ್ಯವಸ್ಥೆಗೆ ಬಲಿಯಾಗಿ
ಧರೆಯೇ ಹೊತ್ತಿ ಉರಿಯುವಾಗ
ಬದುಕಲು ತಲ್ಲಣ ಶುರುವಾಗಿದೆ
0821ಎಎಂ06092017
*ಅಮುಭಾವಜೀವಿ *
No comments:
Post a Comment