Friday, September 29, 2017

ಯಾವ ನೋವು ನಿನ್ನ ಕಾಡಿದೆ ಏಕೆ ನಿನ್ನ ಮನವು ನೊಂದಿದೆ ಯಾವ ಕಾರಣವೋ ನಾನು ಕಾಣೆ ನಿನ್ನ ವೇದನೆಗೆ ಉಪಶಮನವೇನೋ ಕಾಣೆ /ಪ/ ಮೊದಲೇ ಹೆದರುವವನ ಮೇಲೆ ಹಗ್ಗ ಹಾವಾಗಿ ಕಾಡಿತದೇಕೆ ಮೃದು ದಳದ ಹೂವ ಮೇಲೆ ಬರಸಿಡಿಲು ಬಂದೆರಗಿತದೇಕೆ ನೋಯುವ ಸರದಿ ಬಿಟ್ಟು ಛಲದಿ ಎಲ್ಲ ದೂರ ಅಟ್ಟು |೧| ಯಾರಿಗಿಲ್ಲ ಇಲ್ಲಿ ನೋವು ಒಂದೇ ಭಾರಿಗೆ ಒಲಿಯದು ಗೆಲುವು ಸತತ ಸೋಲುವ ಮನದೊಳಗೆ ಗೆಲ್ಲುವ ಭರವಸೆಯ ಕಾಣಬೇಕು ಮರೆತುಬಿಡು ಎಲ್ಲ ನೋವ ಕದ ತೆರೆದು ನೋಡು ಜಗವೆಲ್ಲ |೨| ಹೆಜ್ಜೆ ಇಡುವ ಭರದಲಿ ಎಡವುವ ಭಯ ಕಾಡದೆಂದು ಸದ್ದು ಮಾಡುವ ಮಡಿಕೆಯಲ್ಲಿ ತುಂಬ ನೀರು ಇರಲಾರದೆಂದೆದೂ ಮಾತನಾಡಿ ಎಲ್ಲ ಮರೆತುಬಿಡು ಮೌನದಲ್ಲಿ ಎಲ್ಲ ತೊರೆದುಬಿಡು |೩| ತುಸು ಮೆಲ್ಲ ಗಾಳಿ ಬೀಸಿದಂತೆ ಹುಸಿನಗತಲಿರು ಯಾವ ನೋವು ಕಾಡದು ಹಸಿರೆಲೆಯ ಮೇಲೆಯೇ ತಾನೇ ಇಬ್ಬನಿಯು ಮಾಣಿಕ್ಯದಂತೆ ಹೊಳೆವುದು 0956ಪಿಎಂ28082017 *ಅಮುಭಾವಜೀವಿ*

No comments:

Post a Comment