Friday, September 29, 2017

*ಓಡುವ ತಾಯಿ ಮಹದಾಯಿ* ಓ ತಾಯಿ ಮಹದಾಯಿ ನೀನಾಗು ಕರುಣಾಮಯಿ ಮೈದುಂಬಿ ಹರಿಯುತಲಿ ಬಾಯಾರಿಕೆ ನೀಗು ಮಹತಾಯಿ ಬರ ನಮಗೆ ಬರೆ ಎಳೆದು ಹನಿನೀರಿಗೂ ಅನ್ಯಾಯವಾಗಿ ಜೀವಜಲಕಾಗಿ ಕೂಗಿಕೂಗಿ ಬಾಯಿ ಒಣಗಿದೆ ತಣಿಸು ಬಾತಾಯಿ ನಮಗೆ ಬದುಕಲಾಗದ ಬಲು ದಾಹ ಆಳುಗರಿಗೆ ಅಧಿಕಾರದ ಮೋಹ ನಿತ್ಯ ನಮಗಿಲ್ಲಿ ನಿಲ್ಲದ ಪರದಾಟ ಅವರಿಗೋ ಪರಸ್ಪರ ಕೆಸರೆರಚಾಟ ಪ್ರತಿಭಟನೆಯ ಬೆಂಕಿಯೊಳಗೆ ತಮ್ಮ ಬೇಳೆ ಬೇಯಿಸಲು ಹವಣಿಸಿದರು ನ್ಯಾಯ ಕೇಳಿದ ಅಮಾಯಕರ ಮೇಲೆ ಲಾಟಿ ಏಟು ಕೊಟ್ಟು ಹತ್ತಿಕ್ಕಿದರು ವರ್ಷಗಟ್ಟಲೇ ಕಾದು ಕೇಳಿದರೂ ಅವರ ಕಿವಿಗೆ ನಮ್ಮ ಕೂಗು ಕೇಳಲಿಲ್ಲ ಇವರು ಅವರ ಮೇಲೆ ಅವರು ಇವರ ಮೇಲೆ ಹೇಳಿ ಕಾಲ ಕಳೆದರು ನ್ಯಾಯ ಕೊಡಿಸಲಿಲ್ಲ ಓ ತಾಯಿ ಮಹದಾಯಿ ನೀನಾದರೂ ಕೇಳಿಸಿಕೋ ನಮ್ಮ ಬಾಯಾರಿದ ಗೋಳು ಹನಿಹನಿಯಾಗಿ ಕೂಡಿಸಿ ಹಳ್ಳವಾಗಿ ಹರಿದು ದಾಹ ನೀಗಿ ಹಸನಾಗಿಸು ನಮ್ಮ ಬಾಳನು 0214ಪಿಎಂ02092017 *ಅಮುಭಾವಜೀವಿ*

No comments:

Post a Comment