Tuesday, September 12, 2017

*೧•ಮಧುರ ಸಾಕ್ಷಿ* ಮುತ್ತು ಮುತ್ತು ಸಿಹಿಮುತ್ತು ಸೋತ ಮನಕೆ ತಾಕತ್ತು ಆಪ್ತ ಭಾವದ ಗಮ್ಮತ್ತು ಅದುವೇ ಪ್ರೀತಿಯ ಸಂಪತ್ತು ತಾಯಿಯ ಮಡಿಲಲಿ ಮಲಗುವ ಕಂದನ ಭಯ ದೂರ ಮಾಡುವ ಸಿಹಿಮುತ್ತು ಅಮ್ಮನು ನೀಡುವ ಭರವಸೆಯೊಂದೇ ಕಂದನ ಮುದ್ದಿಸುವಾ ಸವಿಮುತ್ತು ಸೋದರ ಭಾವದ ಬಂಧವು ಬೆಸವ ಬಾಲ್ಯದ ಬಾಂಧವ್ಯದ ಸಿಹಿಮುತ್ತು ಸ್ನೇಹದ ಸೌಹಾರ್ದದ ಅಪ್ಪುಗೆಯ ಸದ್ಭಾವದ ಸವಿ ಮುತ್ತು ಹರೆಯದ ಅಮಲಲಿ ಜೋಡಿ ಜೀವಗಳ ಮಧುರ ಕ್ಷಣಗಳ ಸಾಕ್ಷಿ ಈ ಸಿಹಿಮುತ್ತು ಪ್ರೀತಿಯ ಜ್ಯೋತಿಯ ಬೆಳಕಲಿ ಕಣ್ಮುಚ್ಚಿ ಆನಂದಿಸುವ ಸವಿ ಹೊತ್ತು ಬಾಳ ಹೋರಾಟದಲಿ ಸೋತ ಸಂಗಾತಿಯ ಹುರಿದುಂಬಿಸುವ ಸಾಧನವೀ ಸಿಹಿಮುತ್ತು ಎಲ್ಲಾ ನೋವನು ಕ್ಷಣದಲಿ ಮರೆಸುವ ದಿವ್ಯೌಷಧಿ ಈ ಒಲವಿನ ಸವಿ ಮುತ್ತು ಮುಪ್ಪಿನ ಕಾಲದಿ ಸವೆದ ಹಾದಿಯ ಸವಿನೆನಪನು ಹಸಿರಾಗಿಸೋ ಸಿಹಿಮುತ್ತು ಎಲ್ಲಾ ಕಾಲಕೂ ಎಲ್ಲ ಕುಲಕೂ ಸಲ್ಲುವ ಗಟ್ಟಿ ನಿಲುವು ನೀಡುವ ಸವಿ ಮುತ್ತು 0235ಪಿಎಂ09092017 *ಅಮುಭಾವಜೀವಿ*

No comments:

Post a Comment