ದೀಪವಿರದ ಬಾಳಿನಲ್ಲಿ*
ದೀಪವಿರದ ಬಾಳಿನಲ್ಲಿ /ಜ್ಯೋತಿಯನೆಲ್ಲಿ ತರಲಿ
ಅಂಧಕಾರದ ತಿಮಿರದಲ್ಲಿ/ಪ್ರೀತಿಯನೆಲ್ಲಿ ಹುಡುಕಲಿ// /ಪ/
ವಿಧಿ ಬರೆದ ನಾಟಕದಲ್ಲಿ/ವಿಧಿಯಿಲ್ಲದೆ ನಟಿಸೋ ಪಾತ್ರ ನಾನು
ಕರುಣೆಯಿರದ ಬದುಕಿನಲ್ಲಿ / ಬಸವಳಿದ ಕರುವು ನಾನು
ಹೇಗೆ ಹೇಳಲಿ ಯಾರ ಕೂಗಲಿ/ಕೈ ಹಿಡಿದು ನಡೆಸುವವರಾರೋ /೧/
ಹರೆಯದಮಲು ನೆತ್ತಿಗೇರಿ/ಹಿರಿಯರ ಮಾತ ಗಾಳಿಗೆ ತೂರಿ
ಪ್ರೀತಿಸಿದೆ ಪರೀಕ್ಷಿಸದೇ/ಪರಿತಪಿಸುತಿಹೆ ನಾನಿಲ್ಲಿ
ಪ್ರೀತಿಯ ನಂಜು ಕೊಲ್ಲುತಿದೆ/ನನ್ನ ಉಳಿಸಿಕೊಳ್ಳುವವರಾರೋ /೨/
ಎಲ್ಲಿಹುದೋ ಆ ಹಣತೆ /ತರುವುದೇ ನನಗೊಂದು ಘನತೆ
ಸೋತ ಪ್ರೀತಿಯ ಮತ್ತೆ ಪಡೆಯಲು/ಸಂತ ವಸಂತನಾಗುವನೇ
ದಾರಿ ಕಾಣದೂರಿಗೆ ಮತ್ತೆ /ಪ್ರೀತಿಯ ದಾರಿದೀಪ ವಾಗುವವರಾರೋ /೩/
೦೬೫೨ಎಎಂ೦೬೦೭೨೦೧೭
*ಅಮುಭಾವಜೀವಿ*
No comments:
Post a Comment