ಈ ಸುಂದರ ಸಂಜೆಯಲಿ
ಗೋಧೂಳಿಯ ವೇಳೆಯಲಿ
ಸವಿಭಾವದ ಹಾಡಿಗೆ
ನಾ ಮರಳುವೆ ಗೂಡಿಗೆ
ಪಡುವಣದ ಮೇಘ ಚಿತ್ತಾರ
ಆಹಾ! ಎಷ್ಟೊಂದು ಸುಂದರ
ಜೋಡಿ ಹಕ್ಕಿ ಗೂಡ ಹೊಕ್ಕಿ
ಗುಟುಕನಿಕ್ಕೋ ಸುಂದರ ಸಂಸಾರ
ದೂರದಲ್ಲಿಳಿಯುತಿರುವ ಇರಳ ಮಾಲೆ
ಕಪ್ಪು ನೆರಳ ಹರಡಿ ಬುವಿಯ ಮೇಲೆ
ಹೊಳೆವ ತಾರೆ ತೊಟ್ಟಿಲಲ್ಲಿ
ಚಂದಿರ ತಾ ಬಂದ ತೇಲಿ ತೇಲಿ
ತಂಗಾಳಿಯು ರಮಿಸುತಿದೆ
ಬೆಳದಿಂಗಳಿಗೆ ಬೆವರಿಳಿಯುತಿದೆ
ಪ್ರಣಯದ ದಿಬ್ಬಣದಲ್ಲಿ
ಕನಸುಗಳ ಸವಿ ನರ್ತನ ನೋಡಲ್ಲಿ
ಪ್ರಕೃತಿಯ ಚೆಲುವಿನ ಶೃಂಗಾರ
ಎಲ್ಲೆ ಮೀರದ ಶುದ್ಧ ಸಂಸ್ಕಾರ
ಖಗಮೃಗಗಳ ಬಾಳಾಧಾರ
ಕವಿ ಕಲ್ಪನೆ ಎಂದೆಂದಿಗೂ ಅಮರ
0527ಪಿಎಂ09092017
*ಅಮುಭಾವಜೀವಿ*
No comments:
Post a Comment