*ತಣಿಯಲಿ ಅವು ಕೂಡ*
ಮುಸ್ಸಂಜೆ ವೇಳೆಯ
ರಂಗೆರಚಿದ ಚಿತ್ರಾವಳಿ
ನಲ್ಲೆ ನಿನ್ನ ಈ ಕೆನ್ನೆಯಲ್ಲಿ
ಮೂಡಣದ ಬೀದಿಯಲಿ
ಮಳೆಬಿಲ್ಲಿನ ಚೆಲುವಂತೆ
ನಿನ್ನ ಕೆನ್ನೆ ಮೇಲಿನ ನಗೆ ಹಾವಳಿ
ಸೋನೆ ಸುರಿವಾಗ
ಜಾರುವ ಹನಿಗೂ ಒಂದಾಸೆ
ಈ ನಿನ್ನ ಕೆನ್ನೆ ಸವರಲು
ಬೆಳ್ದಿಂಗಳು ಕೂಡ
ಬಳುವಳಿಯ ನೀಡಿತು
ಈ ಕೆನ್ನೆ ಚೆಲುವು ಹೆಚ್ಚಾಗಲು
ಬಿರಿದ ಮೊಗ್ಗೊಂದು ಕೊರಗುತಿದೆ
ನಿನ್ನಧರಗಳ ಸ್ಪರ್ಶ ಬೇಕಂತೆ
ಕನ್ಯೆ ನಿನ್ನಂದಕೆ ಮನಸೋತು
ತಾರೆಗಳೆಲ್ಲ ನಿನ್ನ ಕೆನ್ನಯ
ಹೊಳಪ ಬೇಡುತಿವೆ
ನೀಡೊಮ್ಮೆ ತಣಿಯಲಿ ಅವು ಕೂಡ
0601ಪಿಎಂ14092017
*ಅಮುಭಾವಜೀವಿ*
No comments:
Post a Comment