Friday, September 29, 2017

*ಇಲ್ಲಿ ಹಂತಕರಿದ್ದಾರೆ ಎಚ್ಚರ* ಹುಷಾರ್ ಇಲ್ಲಿ ಹಂತಕರಿದ್ದಾರೆ ಅಭಿವ್ಯಕ್ತಿ ಸ್ವಾತಂತ್ರ್ಯವ ಹತ್ತಿಕ್ಕಿ ವೈಚಾರಿಕತೆಯನ್ನು ಪೈಶಾಚಿಕವಾಗಿ ಕೊಲ್ಲುವ ಮಾನವೀಯತೆಯನ್ನೇ ಮರೆತ ಬಾಡಿಗೆ ಹಂತಕರಿದ್ದಾರೆ ಎಚ್ಚರ ವ್ಯವಸ್ಥೆಯ ವಿರುದ್ಧ ಹೋರಾಡಿದರೆ ಸತ್ಯದ ಪರ ಮಾತನಾಡಿದರೆ ಸಮಸ್ಯೆಯ ಕರಾಳ ಮುಖ ತೋರಿದರೆ ತಡಮಾಡದೆ ಕೊಲ್ಲುವ ಹಂತಕರಿದ್ದಾರೆ ಎಚ್ಚರ ಪಂಥೀಯ ಹಾದಿ ತುಳಿದರೆ ಮುಖ್ಯವಾಹಿನಿಗೆ ಕರೆತಂದರೆ ಸೈದ್ಧಾಂತಿಕ ನಿಲುವು ಹೊಂದಿದರೆ ಸಂಚು ಮಾಡಿ ಕೊಲ್ಲುವ ಹಂತಕರಿದ್ದಾರೆ ಎಚ್ಚರ ತನ್ನ ನಿಲುವನ್ನು ಪ್ರಕಟಪಡಿಸಿದರೆ ಅವರ ಗೆಲುವನ್ನು ಖಂಡಿಸಿದರೆ ಸಮಾನತೆ ವಾದ ಮಂಡಿಸಿದರೆ ಗುಂಡಿಕ್ಕಿ ಕೊಲ್ಲುವ ಹಂತಕರಿದ್ದಾರೆ ಎಚ್ಚರ ವಿಚಾರವಂತಿಕೆಯ ಪ್ರತಿಪಾದಿಸಿದರೆ ಮಡಿವಂತಿಕೆಯ ಅನುಮಾನಿಸಿದರೆ ಒಡಂಬಡಿಕೆಗೆ ಒಪ್ಪಿಕೊಳ್ಳದಿದ್ದರೆ ಅಮಾನವೀಯವಾಗಿ ಕೊಲ್ಲುವ ಹಂತಕರಿದ್ದಾರೆ ಎಚ್ಚರ 0722ಎಎಂ07092017 *ಅಮುಭಾವಜೀವಿ*

No comments:

Post a Comment