Friday, September 29, 2017

*ಧನ್ಯವಾದಗಳು ನಿಮಗೆ* ಮಳೆಯನು ಸುರಿದ ಮೋಡಗಳೇ ಧನ್ಯವಾದಗಳು ನಿಮಗೆ ಬದುಕಿಗೆ ಮತ್ತೆ ಚೇತನವಾದೆರಿ ಅದಕೆ ಚಿರಋಣಿಗಳು ನಾವು ನಿಮಗೆ ಬರದಿಂದ ಬೇಸತ್ತ ಒಡಲಿಗೆ ಜೀವಕಳೆ ತಂತು ನಿಮ್ಮೀ ಕೊಡುಗೆ ಭೀಕರತೆ ಎಂಬುದನು ದೂರತಳ್ಳಿ ಮಮತೆಯ ತೋರಿದಿರೀ ಜಗಕೆ ಬತ್ತಿದ ಮಡಿಲಲಿ ಮೊಳೆತಿದೆ ಬೀಜ ಮತ್ತೆ ಜೀವನ ಸಾಗಿದೆ ಸಹಜ ಹಸಿರಿನ ಕುಸುರಿಯ ಎಣೆದಿದೆ ಭೂತಾಯಿ ಮತ್ತೆ ನಗುವಂತಾಗಿದೆ ಸತ್ತ ಕೆರೆಗಳಿಗೆ ಮತ್ತೆ ಜೀವ ಬಂತು ಒಣಗಿದ ನದಿಯಲಿ ನಾದ ತಂತು ಸಂಭ್ರಮವೇ ಈಗ ಎಲ್ಲೆಲ್ಲೂ ಸಮೃದ್ಧ ಬದುಕಿನ್ನು ಯಾವಾಗಲೂ ಹೀಗೆ ನಮ್ಮನು ಸಲಹುತಿರಿ ಕಾಲಕಾಲಕ್ಕೆ ಮಳೆ ಸುರಿಯುತಿರಿ ಬಂಜೆಯ ಒಡಲಲೂ ಖುಷಿ ತಂದಿರಿ ನೆಮ್ಮದಿ ಬದುಕನು ಹರಸಿದಿರಿ 0556ಪಿಎಂ29082017 *ಅಮುಭಾವಜೀವಿ*

No comments:

Post a Comment