[3/22, 9:49 PM] +91 78997 25089: ಕವಿತೆ
1). ಇದರಲ್ಲಿ ಯಾವ ಚೌಕಟ್ಟುಗಳು ಇರುವುದಿಲ್ಲ.
2). ಇದರಲ್ಲಿ ಸಾಮಾಜಿಕ, ಧಾರ್ಮಿಕ ಸೇರಿದಂತೆ ಎಲ್ಲ ವಿಷಯಗಳನ್ನಿಟ್ಟುಕೊಂಡು ಬರೆಯಬಹುದಾಗಿದೆ.
3). ಎಲ್ಲ ರೀತಿಯ ಪದಗಳ ಬಳಕೆ ಮಾಡಿ ಬರೆಯಲಾಗುತ್ತದೆ.
4). ಕವಿತೆ ಪ್ರಾಸ, ಸರಳತೆ ಹಾಗೂ ಲಯಬದ್ಧತೆಯಿಂದ ಕೂಡಿರುತ್ತದೆ.
5). ಬಹುತೇಕ ರಚನೆಗಳು ಹೆಚ್ಚೆಚ್ಚು ಸಾಲುಗಳಿಂದ ಕೂಡಿದ್ದು ಉತ್ತಮವಾದ ಸಂದೇಶವನ್ನು ನೀಡುತ್ತವೆ.
6). ಕೆಲವರು ಕ್ಲಿಷ್ಟಕರವಾದ ಪದಗಳ ಬಳಕೆ ಮಾಡಿದರೆ, ಇನ್ನೂ ಕೆಲವರು ತೀರಾ ಸರಳವಾದ ಪದಗಳನ್ನು ಬಳಸಿ ಬರೆಯುವುದು ಕವಿತೆಯ ವೈಶಿಷ್ಟ್ಯತೆ.
7). ಎಲ್ಲರಲ್ಲಿ ಉತ್ತಮ ಮನೋಭಾವ ಮೂಡಿಸಲು ಕವಿತೆ ಸಹಕಾರಿಯಾಗುವಂತೆ ರಚಿಸಬೇಕಾಗುತ್ತದೆ.
8). ಇದರಲ್ಲಿನ ಉದ್ದೇಶ ಸಮಾಜ ಸುಧಾರಣೆಗೆ ಹೆಚ್ಚಿನ ಒತ್ತು ಕೊಡುವಂತಿರಬೇಕು.
9). ಒಂದು ಕವಿತೆಯಲ್ಲಿ ಹಲವು ರೀತಿಯ ಆಯಾಮಗಳು ಒಗ್ಗೂಡಿಸಿ ಬರೆಯಬಹುದು.
10). ಮನಸ್ಸಿನಲ್ಲಿ ಮೂಡುವ ನೋವು-ನಲಿವು, ಕಷ್ಟ-ಸುಖ, ಸರಸ-ವಿರಸ ಎಲ್ಲಾ ಭಾವನೆಗಳಿಗೆ ವಿಸ್ತಾರ ರೂಪಕೊಟ್ಟು ಬರೆಯಬೇಕೆನ್ನುವುದು ಕವಿತೆಯಲ್ಲಿನ ವಿಶೇಷತೆಯಾಗಿರುತ್ತದೆ.
________________________
[3/22, 9:49 PM] +91 78997 25089: ಕವನ
1). ಇದರಲ್ಲಿ ನಾಲ್ಕು ಅಥವಾ ಆರು ಸಾಲಿನ ಚೌಕಟ್ಟಿರುತ್ತದೆ.
2). ಕವನದಲ್ಲಿ ಶೃಂಗಾರವನ್ನು ಬಿಂಬಿಸುವ ರಮಣೀಯ ಪದಗಳು ಹೆಚ್ಚಾಗಿರುತ್ತವೆ.
3). ಪ್ರತಿ ಪದಗಳ ಬಳಕೆ ಓದುಗನಿಗೆ ಮುದ ನೀಡುವಂತೆ ರಚಿತವಾಗಿರುತ್ತದೆ.
4). ನವ, ನವೀನವಾದ ಪದಗಳ ಬಳಕೆಗೆ ಹೆಚ್ಚಿನ ಆಧ್ಯತೆ ಇರುತ್ತದೆ.
5). ಇದರಲ್ಲಿನ ವಿಷಯವಸ್ತು ಶೃಂಗಾರ ಹಾಸ್ಯದಿಂದ ಹಿಡಿದು ಎಲ್ಲವನ್ನು ಸೂಕ್ಷ್ಮವಾಗಿ ಪ್ರತಿಪಾದಿಸಲಾಗಿರುತ್ತದೆ.
6). ಆಧುನಿಕತೆಗೆ ಒತ್ತು ನೀಡಿ ರಚಿಸಲಾಗುತ್ತದೆ.
7). ಸರಳ ಹಾಗೂ ಸುಂದರವಾದ ಪದಬಳಕೆಯಿಂದ ಕೂಡಿರುತ್ತದೆ.
8). ಕೆಲವುಕಡೆ ವಿವಿಧ ರೀತಿಯ ಪ್ರಾಸಕ್ಕೆ ತುಂಬಾ ಪ್ರಾಮುಖ್ಯತೆ ನೀಡಿ ರಚಿಸಲಾಗುತ್ತದೆ.
9). ಎರಡು ಅಥವಾ ಮೂರು ಸಾಲಿನಿಂದ ರಚಿತವಾದ ಕವನಗಳಿಗೆ ಹೈಕು/ಹನಿಗವನ/ಚುಟುಕು ಎಂದು ಕರೆಯಲಾಗಿದ್ದು, ಇದನ್ನು ಮನೋಹರವಾಗಿ, ಲಘುವಾಗಿ ರಚಿಸಬಹುದಾಗಿದೆ.
10). ವರ್ಣರಂಜಿತ ಪದಗಳಿಂದ ತುಂಬಿದ್ದು ಸಕಾರ ಮತ್ತು ವಿರಾಳ ಭಾವವನ್ನು ಮೂಡಿಸುವುದರಲ್ಲಿ ಸಫಲತೆಯನ್ನು ಕಂಡುಕೊಂಡಿರುತ್ತದೆ.
[3/22, 9:49 PM] +91 78997 25089: ಕಾವ್ಯಕ್ಕೂ ಗದ್ಯಕ್ಕೂ ಏನು ವ್ಯತ್ಯಾಸ? "ಪದ್ಯ"ವೆಂದು ಬರೆದ ತುಂಡು ಸಾಲುಗಳನ್ನು ಒಂದರಪಕ್ಕ ಒಂದು ಜೋಡಿಸಿದರೆ ಗದ್ಯವಾಗುವುದಿಲ್ಲವೇ? ಇದು ಸಾಮಾನ್ಯವಾಗಿ ಕೇಳಿಬರುವ ಪ್ರಶ್ನೆ. ಇದಕ್ಕೆ ಸಾಮಾನ್ಯವಾಗಿ "ಹೌದು" ಎಂದು ಉತ್ತರಿಸಲಾಗುತ್ತದೆ. ಆದರೆ, ಅದು ಹಾಗಲ್ಲ. ನವ್ಯಕಾವ್ಯ ನಿಯತಿಕೃತ ನಿಯಮಗಳನ್ನು ಮೀರಿದರೂ ಅದು ಮೊತ್ತವಾಗಿ ನಿಯಮವಿಹೀನವೇನೂ ಅಲ್ಲ. ಅದು ಕಣ್ಣಿಗೆ ಕಾಣುವ (ಅಥವ ಕಿವಿಗೆ ಕೇಳುವ) "ಅಸಹಜ" ಲಯವನ್ನು ನಿರಾಕರಿಸಿತೇ ಹೊರತು, ಸಾರಾಸಗಟಾಗಿ ಲಯವನ್ನೇ ಅಲ್ಲ. ಅದರ ನಿಲುವು, ಕಾವ್ಯ ಭಾವದ ಲಯವನ್ನು ಅನುಸರಿಸಬೇಕೆಂಬುದಷ್ಟೇ. ಕಾವ್ಯವನ್ನು ನಿರ್ದಿಷ್ಟ ಛಂದಸ್ಸಿನಲ್ಲಿ ಇರುಕುವ ಬದಲು, ಕವನವೊಂದು ತನ್ನದೇ ಛಂದಸ್ಸನ್ನು ಕಂಡುಕೊಳ್ಳಬೇಕೆನ್ನುವುದು ಇದರ ಆಶಯ. ಇದನ್ನು ಬಿಟ್ಟರೆ, ಕಾವ್ಯಕ್ಕೆ ಅನ್ವಯಿಸುವ ಮೂಲಭೂತ ನಿಯಮಗಳೆಲ್ಲಾ ಇಲ್ಲಿಯೂ ಅನ್ವಯಿಸುತ್ತವೆ. ಕಾವ್ಯಕ್ಕೆ ಅದರದೇ ಆದ ಭಾಷೆಯಿದೆ - ಅದು matter-of-factly ಎನಿಸುವ ಗದ್ಯದ ಭಾಷೆಗಿಂತ ತುಸು ಭಿನ್ನವಾದ ನಾಟಕೀಯ ಭಾಷೆ (ಉದಾ: ಬರುತ್ತೀಯಾ - ಬರುವೆಯಾ); ಗದ್ಯಕ್ಕೆ ಒಂದು ಭೌತಿಕ ಲಯವಿಲ್ಲ, ಆದರೆ ಕಾವ್ಯದಲ್ಲಿ ಲಯವಿದೆ, ಅದು ಭಾಷೆಯ ಲಯವಿರಬಹುದು, ಭಾವದ ಲಯವಿರಬಹುದು ಅಥವ ಅಕ್ಷರಗಳ ಲಯವಿರಬಹುದು, ಮುಖ್ಯವೆಂದರೆ, ಅದು ಆ ಕವನದ್ದೇ ಆದ ಲಯ, ಹೊರಗಿನಿಂದ ಹೇರಿದ್ದಲ್ಲ. ಈ ದೃಷ್ಟಿಯಿಂದ, ಕಾವ್ಯ ಲಯವಿಹೀನ ಅಲ್ಲವೇ ಅಲ್ಲ; ತಂತ್ರಗಾರಿಕೆಯಿಂದ ಗದ್ಯ-ಕಾವ್ಯಗಳು ಬೇರೆಯೇ.
Saturday, June 22, 2019
Subscribe to:
Post Comments (Atom)
No comments:
Post a Comment