*ಏಕೆ ಖಾಲಿಯಾದನೋ?*
ಏಕೆ ಖಾಲಿಯಾದನೋ
ನನ್ನೊಳಗಿನ ಆತ್ಮ ಕವಿ
ಕಾಣದಾದನೇ ಬದುಕಲಿ
ಇರುವ ಆ ಮಧುರ ಸವಿ
ಬೇಲಿಯಲಿದ್ದರೂ ಹೂವು
ನಗುವುದ ಕಂಡೂ ಮುದಗೊಳ್ಳದಾದ
ನಾಳೆಯ ಕನವರಿಕೆಯಲಿ
ಇಂದಿನ ಆನಂದವನು ಅನುಭವಿಸದಾದ
ಸ್ವಂತಿಕೆಯ ಬಿಟ್ಟು ಕೊಟ್ಟು
ಆಕರ್ಷಣೆಗೆ ಬಲಿಯಾದ
ಭಿನ್ನತೆಯ ಕಂಡು ಕಂಗೆಟ್ಟು
ವಿಭಿನ್ನತೆಯ ಅವಕಾಶವಂಚಿತನಾದ
ಇನ್ನೂ ಕಾಲ ಮಿಂಚಿಲ್ಲ
ಮೊದಲ ಹಾದಿಗೆ ಹಿಂತಿರಗಬಹುದು
ಋತುಮಾನಕೆ ಬದಲಾಗುವ
ನಿಸರ್ಗದಂತೆ ಆ ಸೊಬಗ ಪಡೆಯಬಹುದು
ಅಂರ್ತಮುಖಿಯಾಗಿ ಆಲೋಚಿಸಿ
ಬದುಕಿನ ಗಾಂಭೀರ್ಯತೆಯನರಿತು
ಅನುಭವದ ಅಲಾಪನೆಯಲ್ಲಿ
ಭಾವಗಳ ಅರಮನೆಯ ಕಟ್ಟಿ ಕೊಡು
0912ಎಎಂ22062019
*ಅಮು ಭಾವಜೀವಿ*
No comments:
Post a Comment