*ಮೌನ*
ಮೌನವೇ ಜಗದ ಸಂಸ್ಕಾರ
ಧ್ಯಾನವೇ ಅದರ ರೂಪಾಂತರ
ಯಾರನ್ನೂ ಕೆಣಕದ ಹಾಗೆ
ಆಗುವುದು ರವಿ ಶಶಿಯರ ಹುಟ್ಟು
ಬೆಳಕ ಬೀರಿ ಪುಳಕ ತೋರಿ
ಬಿಚ್ಚಿ ಇಡುವರು ಜಗದ ಗುಟ್ಟು
ಮೊಳಕೆ ತಾನು ಬೆಳೆಯುವುದು
ಯಾರ ಗಮನಕ್ಕೂ ಬಾರದೆ
ಹೂವು ತಾನು ಅರಳುವುದು
ಚೆಲುವ ತೋರಲು ಸದ್ದಿಲ್ಲದೆ
ಕಿರಣ ತಾನು ವೇಗದಿ ಓಡಿದರೇನು
ಮಾತಿಲ್ಲದೆ ಪ್ರೇರೇಪಿಸುವುದು
ತೀರದಿ ಸಾಗರ ಭೋರ್ಗರೆದರೋ
ಆಳದಿ ಪ್ರಶಾಂತವಾಗಿರುವುದಲ್ಲವೆ ಅದು
ಇರುಳ ಬಾನ ಮೆರಗು ತಾನೇ
ತಾರೆ ದಂಡು ಮೌನದಿ ಮಿನುಗುವುದು ನಿಸರ್ಗವೇ ಅಲ್ಲಿ ಶಾಂತತೆಯಲ್ಲಿ
ಮೌನವ ತಬ್ಬಿ ಮಲಗುವುದು
ಮಾನವ ಮಾತ್ರ ಹುಟ್ಟು-ಸಾವಲಿ ಅತ್ತು
ತೋರುವ ಎಲ್ಲಾ ತನ್ನದೆನ್ನುವ ಗತ್ತು ಅವನ ಮಾತೆ ಅವನಿಗೆ ಆಪತ್ತು
ಕಸಿದುಕೊಳ್ಳುವುದು ನೆಮ್ಮದಿಯ ಸಂಪತ್ತು
07012015
*ಅಮು ಭಾವಜೀವಿ*
No comments:
Post a Comment