Friday, June 21, 2019

ತನ್ನದಲ್ಲದ ತಪ್ಪಿಗೆ ಸಿಲುಕಿ
ಮೈ ಮಾರಿಕೊಂಡವಳು ಸಾಕಿ

ಯೌವ್ವನವ ಸಂಭ್ರಮಿಸುವ ಮೊದಲೇ ಕಾಮ ಕ್ರಿಮಿಯ ತೃಷೆಗೆ ಬಲಿಯಾದವಳು ಸಾಕಿ

ಆಚಾರವನೇ ನಂಬಿದ  ಮನೆಯೊಳಗೆ
ವ್ಯಭಿಚಾರದ ಹೆಸರ ಹೊತ್ತು ಬಂದವಳು ಸಾಕಿ

ಹರಿದ ಬಟ್ಟೆಯೊಳಗಿನ ಅಂಗಾಂಗವನೇ
ಕಂಡು ಆನಂದಿಸುವಾಗ ನೊಂದವಳು ಸಾಕಿ

ಕಾಮದ ಕೊಚ್ಚೆಯಲ್ಲಿ ಬಿದ್ದು
ಪ್ರೇಮಕಾಗಿ ಹಂಬಲಿಸಿದ್ದಳು ಸಾಕಿ

ಮೈಯನುಂಡವರೆಲ್ಲ ಮನಸ್ಸು
ಕೊಂದರೆಂದು ನೊಂದಿದ್ದಳು ಸಾಕಿ

ಬೇಡದ ಬದುಕಿನಲ್ಲಿ ಕಾಡಿದ
ನೋವುಗಳಿಗೆ ಬಲಿಯಾದವಳು ಸಾಕಿ

ಅಮುವಿನಂತರಂಗವ ಕಲಕಿ
ಭಾವಯಾನದ ವಸ್ತುವಾದಗಳು ಸಾಕಿ

ಅಮು ಭಾವಜೀವಿ

No comments:

Post a Comment