ಬಡತನದ ಬೇಗೆಯೊಳಗೆ
ಅರಳುತ್ತಿತ್ತು ಒಂದು ಪ್ರತಿಭೆ
ಮುಂದೆ ಜಗಕೆ ಬೀರಿತು
ತನ್ನೊಳಗಿನ ಅಗಾಧ ಪ್ರಭೆ
ನಿತ್ಯ ಪತ್ರಿಕೆಯ ಹಂಚುತ್ತಾ
ದೇಗುಲ ಪ್ರಸಾದವನು ತಿನ್ನುತ್ತಾ
ಹಳ್ಳಿಯ ಬಾಲಕ ನಾಸಾದ ಬಾಗಿಲ
ಮುಟ್ಟಿದ ಮಹಾಸಾಧಕ
ಭಾರತೀಯ ಬಾಹ್ಯಾಕಾಶಕ್ಕೆ
ಹೊಸ ಭಾಷ್ಯ ಬರೆದು
ಕ್ಷಿಪಣಿಯ ಜನಕನೆನಿಸಿ
ಕ್ಷಿಪ್ರಗತಿಯಲ್ಲಿ ಬೆಳೆದ ಕಲಾಂ
ವಿಜ್ಞಾನದ ಸುಜ್ಞಾನವನ್ನು
ಜನಸಾಮಾನ್ಯರಿಗೆ ತಲುಪಿಸಿ
ಅತ್ಯುನ್ನತ ಹುದ್ದೆಗೇರಿದ
ಪ್ರಭುತ್ವದ ಮೂಲ ಬೇರು
ಮಕ್ಕಳು ಅಂದರೆ ಪಂಚ ಪ್ರಾಣ
ಯುವಕರಲ್ಲಿ ಬಿತ್ತಿದರು ಕನಸುಗಳನ್ನು
ಭಾರತದ ಶಕ್ತಿಯ ಜಗಕೆ ತೋರಿ
ಅಣ್ವಸ್ತ್ರದ ಬಲ ವ ತುಂಬಿ
ನಾಡಿನ ಏಳಿಗೆಗೆ ಕೊನೆಯುಸಿರಿರುವ
ತನಕ ಬದುಕಿ ಬಾಳಿದ ಬ್ರಹ್ಮಚಾರಿ
ಮತ್ತೆ ಹುಟ್ಟಿ ಬನ್ನಿ ಕಲಾಂ
ನಿಮಗಿದು ನನ್ನ ಸಲಾಂ
1232ಪಿಎಂ15102018
ಅಮು ಭಾವಜೀವಿ
No comments:
Post a Comment