Saturday, June 22, 2019

ಏಕೆ ನೀನು ತೊರೆದು ಹೋದೆ
ನಾನು ಈಗ ಒಂಟಿಯಾದೆ

ಯಾವ ಕಾರಣ ಹೇಳು ನೀನು
ಆದ ತಪ್ಪಿನ ವಿಷಯವೇನು
ತಿದ್ದಿಕೊಳಲು ನೀಡು ಅವಕಾಶ
ನೀನಿಲ್ಲದೆ ನನಗಿಲ್ಲ ಸಂತೋಷ

ನೀನು ಇರದೆ ಸೂರ್ಯ ಬರನು
ನನ್ನ ಬರಡು ಬಾಳಲಿ
ನಿನ್ನ ಮಾತು ಕೇಳದಿರೆನು
ನನ್ನ ನೋವ ಯಾರಿಗೆ ಹೇಳಲಿ

ನಿನ್ನ ಒಂದು ನಗುವೆ ಸಾಕು
ಈ ನನ್ನ ಜೀವ ಬದುಕಲು
ಎಲ್ಲಿಗೆ ಹೋಗಿ ನಿಲ್ಲಲಿ !
ಆದ ಗಾಯ ಮಾಯಲು

ನೀನೇ ನನ್ನ ಬದುಕು ಎಂದು
ಭವದ ಬೇಟೆಗೆ ಬಂದೆನು
ನೀನೇ ಇರದೆ ಹೋದ ಮೇಲೆ
ಯಾರಿಗಾಗಿ ಬದುಕಲಿ ಇನ್ನು

ಮನಸು ಬದಲಿಸು ನನ್ನ ಮನ್ನಿಸು
ಮತ್ತೆ ನೀಡದಿರು ನೋವನು
ಪಶ್ಚಾತ್ತಾಪಕಿಂತ ಶರಣಾಗತಿಯುಂಟೆ
ಕೈಹಿಡಿದು ನಡೆಸೆನ್ನನು

0724ಎಎಂ09042018

ಅಮುಭಾವಜೀವಿ

ಶಶಿರೇಖ ವಿಜಯಪುರ ಅವರ ಪ್ರತಿಕ್ರಿಯೆ

ಒಂದೊಂದು ಬಾರಿ ತಪ್ಪೇ ಇಲ್ಲದ ಮನವನ್ನ ಅಪಾರ್ಥ ಮಾಡಿಕೊಂಡೂ ಪ್ರೀತಿಸಿದ ಮನಸು ದೂರಾ ಹೋಗುತ್ತದೆ
ಆದರೂ ಈ ಪ್ರೇಮಿಯ ಮನಸು ತಪ್ಪಿದ್ದರೆ ತಿಳಿಸಿಬಿಡು ತೊದ್ದಿಕೋತೀನಿ ಅಂತ ಹೇಳತ್ತಲ್ಲ ಆ ಭಾವ ಕೊಡುವಂತಹ ಖುಷಿಯನ್ನ ಇನ್ಯಾವ ಭಾವ ಕೂಡಾ ಕೊಡಲ್ಲ ಅನಿಸತ್ತೆ
👌👌👌👌 ಸುಪರ್ ಅಮು ಸರ್ 🙏🙏🙏

No comments:

Post a Comment