Saturday, June 22, 2019

*ಕಾಲಬಂದಿದೆ*

ಅಭ್ಯರ್ಥಿಯ ಯೋಗ್ಯತೆಯನು
ಅರಿತು ನೀಡಿರಯ್ಯ ಮತವನ್ನು
ಪೊಳ್ಳು ಭರವಸೆಗಳ ನಂಬದೇ
ಉತ್ತಮರನ್ನು ಆರಿಸೋ ಅಧಿಕಾರ ನಿಮ್ಮದೇ

ಐದು ವರ್ಷಎಲ್ಲೋ ಇದ್ದು
ಬಂದಿಹರು ಈಗ ಎದ್ದು
ಮರುಳು ಮಾಡುವರು ಆಮಿಷವೊಡ್ಡಿ
ಗೆದ್ದ ಮೇಲೆ ಇತ್ತ ಸುಳಿಯರು ನೋಡಿ

ಆಳುವವನಿಗೆ ಅಳುಕಿರಬೇಕು
ಅದಕ್ಕೆ ನೀನು ಪ್ರಾಮಾಣಿಕನಾಗಿರಬೇಕು
ಮಾರಿದರೆ ನಿನ್ನ ವೋಟು
ತೆರೆಯದು ಅವರ ಮನೆಯ ಗೇಟು

ದುಡಿಯುವ ಕೈಗೆ ಕೆಲಸವಿತ್ತು
ಸಾಲಗಾರರ ದೂರವಿತ್ತು
ಸ್ವಾಭಿಮಾನದ ಬದುಕು ನೀಡುವ
ಅಭ್ಯರ್ಥಿಯ ಆರಿಸಿಕೊಳ್ಳಿ

ಒಂದು ಕ್ಷಣದ ನಿಮ್ಮ ತಪ್ಪು
ಐದು ವರ್ಷ ಮರಳಿಸುವುದು ನಿಮ್ಮನ್ನು
ಯೋಚಿಸಿ ಮತ ನೀಡಿದರೆ
ಮತ್ತೆ ನಿಮಗೆ ಬಾರದು ತೊಂದರೆ

ಮತದಾನ ನಿನ್ನ ಹಕ್ಕು
ಚಲಾಯಿಸು  ಕಾಲ ಬಂದಿದೆ
ಬದಲಿಸಲು ರಾಜ್ಯದ ದಿಕ್ಕು
ಅವಕಾಶ ಈಗ ನಿನ್ನ ಮುಂದಿದೆ

0233ಪಿಎಂ30042018

*ಅಮು ಭಾವಜೀವಿ*
   

No comments:

Post a Comment