*ನಿನ್ನಂತೆಯೇ ನಾನು*
ಓ ಇಬ್ಬನಿಯೇ ನೀನು
ಸೂರ್ಯಕಾಂತಿಗೆ ಕರಗುವೆ
ಹೆಣ್ಣಾಗಿ ಹುಟ್ಟಿ ನಾನು
ಕಿರುಕುಳಕ್ಕೆ ಕಮರಿರುವೆ
ಓ ಸುಮಗಳೇ ನೀವು
ಅಂದವಾಗಿ ಅರಳಿ ಬೀಗುವಿರಿ
ಸ್ತ್ರೀ ಕುಲದಿ ಬೆಳೆದ ನಾನು
ಅಸ್ಥಿರ ಬಾಳಲ್ಲಿ ಬಾಗಿರುವೆನು
ಹರಿಯುವ ಓ ನೀರೆ
ನೀ ಎಲ್ಲರ ಕೊಳೆಯ ತೊಳೆಯುವೆ.
ನಿನ್ನಂತೆಯೇ ನಾನು ನೀರೆ
ಆದರೆ ಎಲ್ಲರ ಕಾಮ ದೃಷ್ಟಿಗೆ ಬಳಲಿರುವೆ
ಓಡುವ ಮೋಡವೆ ನಿನಗಿಲ್ಲ ಗೊಡವೆ
ನೀ ಮಳೆಯಾಗಿ ಸುರಿದುಎಲ್ಲ ಮರೆವೆ
ನಿತ್ಯ ನನ್ನ ದುಗುಡ ಕಳೆಯದೆ
ಮಹಿಳೆಯಾಗಿ ಎಲ್ಲ ಸಹಿಸಿ ಮೆರೆವೆ
ಇಂದಿಗೆ ಕೊನೆ ನನ್ನ ಈ ವೇದನೆ
ಯಾರಿಂದ ಪಡೆಯಲಿ ನಾ ರಕ್ಷಣೆ
ಸಾಕಾಗಿದೆ ಹೆಣ್ಣೆಂಬ ಈ ಬಾಳು
ದಿನದಿನಕೂ ಹೆಚ್ಚಾಗಿದೆ ದೌರ್ಜನ್ಯದ ಗೋಳು
*ಅಮು ಭಾವಜೀವಿ*
No comments:
Post a Comment