ಗೂಡು ಬಿಟ್ಟು ಹಾರಿತೆಲ್ಲಿಗೆ ಹಕ್ಕಿ
ನೀಲ ನಭದ ಮೋಡದೊಳಗೆ ಹೊಕ್ಕಿ
ಗುಟುಕನಿಟ್ಟ ತಾಯಿ ಕೂಗಿ ಕರೆಯುತಿರಲು
ಬಾರದೆ ಎಲ್ಲಿ ಅಡಗಿತು
ಇಂತಹ ಸಿರಾ ಬನವ ಬಿಟ್ಟುು
ಗಮ್ಯದೆಡೆಗೆ ಗುರಿ ಇಟ್ಟು
ಬಲಿತ ರೆಕ್ಕೆ ಬಡಿದು ಹಕ್ಕಿಯು
ಎಲ್ಲಿ ಸೇರಿತೋ ನಭದಲಿ
ಬೆಳಕು ಈಗ ಕಳೆಯುತ್ತಿದೆ
ಇರುಳು ಮೆಲ್ಲ ಕವಿಯುತಿದೆ
ವಲಸೆ ಹೋದ ಹಕ್ಕಿಗೀಗ
ಗೂಡಿನ ನೆನಪು ಬಾರದೆ
No comments:
Post a Comment