Saturday, June 22, 2019

*ಧರೆಗಿಳಿದ ಷೋಡಸಿ*

ಇವಳು ಯಾರು
ಇವಳದು ಎಲ್ಲಿ ಸೂರು

ಪೂರ್ಣಚಂದಿರ ವದನ
ಹೊಳೆವ ತಾರೆ ನಯನ
ಹುಬ್ಬು ಕಾಮನಬಿಲ್ಲು
ನಗು ಮಾತ್ರ ಚೆಲ್ಲುಚೆಲ್ಲು

ನೀಳ ಕೇಶರಾಶಿಯವಳು
ಇವಳ ಅಂದಕ್ಕೆ ಮೆರಗು ಈ ಮುಂಗುರುಳು
ಇವಳದು ಹಂಸ ನಡಿಗೆ
ತನುವು ಮಧು ತುಂಬಿದ ಗಡಿಗೆ

ಇವಳ ಕುಡಿ ನೋಟಕ್ಕಿದೆ
ಹುಡುಗರ ಎದೆಗೆ ನಾಟುವ ಚೂಟಿ
ಅವಳ ಮಾತಿಗಿದೆ ಜಗವ
ತಡೆದು ನಿಲ್ಲಿಸುವ ಛಾತಿ

ಇವಳಿಗಿರುವ ಭರವಸೆ ನೋಡಿ
ಕಲಿಯಬೇಕು ಎಲ್ಲರೂ
ಆದರೂ ಇವಳ ಮನದಲ್ಲೇನಿದೆ
ಎಂಬುದನ್ನು ಅರಿತವರಿಲ್ಲ ಯಾರು

ಏನೇ ಆದರೂ ಇವಳೊಂದು ಸೌಂದರ್ಯ ರಾಶಿ
ಧರೆಗಿಳಿದು ಬಂದಂತ ಷೋಡಶಿ

೬೪೪ಎಎಂ೨೬೧೧೨೦೧೪

No comments:

Post a Comment