*ತನ್ನ ತಾ ತೆರೆದು*
ಬಾನ ಬಯಲಿನಲಿ
ಹೊನ್ನ ತೇರಿನಲಿ
ರವಿ ಮೂಡಿ ಬಂದ
ಹಸಿರೆಲೆಯ ಮೇಲೆ
ಇಬ್ಬನಿ ಹನಿ ಜಾರಿ
ರವಿಕಿರಣಕೆ ಹೊಡೆಯಿತು
ತುಸು ಬೀಸೋ ತಂಗಾಳಿ
ಸುಮದ ಮೈ ಸವರಿ
ಸುಪ್ರಭಾತಕೆ ಸುವಾಸನೆ ಬೀರಿತು
ಹರಿವ ನೀರ ಧಾರೆ
ಪುಳಕಿತಗೊಂಡು ಮನಸಾರೆ
ಸಂಭ್ರಮದಿ ಭೋರ್ಗರೆಯಿತು
ಗೂಡಿನೊಳಗೆ ಬೆಚ್ಚಗಿದ್ದ ಹಕ್ಕಿ
ಮರಿಯ ಬಿಟ್ಟು ಗುಟುಕು ತರಲು
ಹೊರಟಿತು ಸವಿದನಿಯಲಿ ಹಾಡುತ
ಮಲಗಿದ್ದ ಗಿರಿಗಳ ಮೈ ಸವರಿ
ಹಸಿರು ಹೊದ್ದ ಬೆಟ್ಟವನೇರಿ
ಹೊಂಗಿರಣವ ಚೆಲ್ಲಿತು ಮುಂಜಾನೆ
ನಿಸರ್ಗವೇ ತನ್ನ ತಾ ತೆರೆದು
ಬೆಳಗಿಗೆ ತನ್ನ ಆಂತರ್ಯ ತೋರಿ
ಜಗಕೆ ಚೆಲುವನುಣಬಡಿಸಿತು
0801ಎಎಂ24072018
*ಅಮು ಭಾವಜೀವಿ*
ಚಿತ್ರದುರ್ಗ
No comments:
Post a Comment