Friday, June 21, 2019

ಬದುಕು ಎಲ್ಲವನ್ನೂ ಕಲಿಸುತ್ತದೆ. ಆದಷ್ಟು ಅದು ಆಸೆಗಳನ್ನು ಸೋಲಿಸಿ,ನಿರಾಸೆಗಳನ್ನ ಬೆಂಬಲಿಸಿ ಎಟಿನ ಮೇಲೆ ಏಟು ನೀಡುತ್ತಾ ಪಾಠವನ್ನು ಕಲಿಸುತ್ತದೆ. ನಡೆಯುವವನು ಎಡವದೇ ಕೂತವನು ಎಡುವಲಾರ ಎಂಬಂತೆ ಜೀವನ ಪಯಣದಲ್ಲಿ ಎಲ್ಲರೂ ಎಡವಿ ಬಿದ್ದವರೇ. ಆದರೆ ಕೊಡವಿ ಮೇಲೆದ್ದವರು ಬಲು ಕಡಿಮೆ. ಹಾಗೆ ಎದ್ದು ಮುನ್ನಡೆದವರೇ ಸಾಧಕರು . ಬಿದ್ದು ಅಲ್ಲೇ ಅಳುತ್ತಿರುವವರು, ಯಾರಾದರೂ ಬಂದು ಮೇಲೆತ್ತಲಿ ಎಂದು ಕಾಯುವವರು ಎಂದು ಗುರಿ ಸಾಧನೆ ಮಾಡುವಲ್ಲಿ ಯಶಸ್ವಿಯಾಗರು.

  ಮನುಷ್ಯನ ಜೀವಿತಾವಧಿಯಲ್ಲಿ ಒಂದೊಂದು ಅವಸ್ಥೆಯಲ್ಲಿ ಒಂದೊಂದು ತೆರನಾದ ಆಸೆ ನಿರಾಸೆಗಳಿರುತ್ತವೆ. ಬಾಲ್ಯದಲ್ಲಿ ಯಾವುದೋ ಒಂದು ವಸ್ತುವನ್ನು ಬಯಸಿ ಅದನ್ನು ಹೆತ್ತವರು ಕೊಡಿಸಲಿಲ್ಲ ಎಂದು ರಚ್ಚೆ ಹಿಡಿವ ಮಕ್ಕಳು ತನಗೆ ಬೇಕಾದುದನ್ನು ಪಡೆಯುವಲ್ಲಿ ಯಶಸ್ವಿಯಾಗಬಹುದು ಇಲ್ಲ ಹೆತ್ತವರ ಕೋಪಕ್ಕೆ ತುತ್ತಾಗಿ ಒದೆ ತಿಂದು ತನ್ನ ಆಸೆಯನ್ನು ಅಲ್ಲೇ ಕಮರಿಸಿಕೊಳ್ಳಬಹುದು.

No comments:

Post a Comment