*ನನ್ನ ಕವಿತೆ*
ಕವಿತೆ ಅರಳುವುದು
ಹೂವಿನಂತೆ
ಓದುಗನ ಎದೆ ತಣಿಸುವುದು
ಅದರ ಪರಿಮಳದಂತೆ
ನನ್ನ ಕವಿತೆ ಬರೀ
ಕವಿತೆ ಅಲ್ಲ
ಅದು ಸದಾ ಬೆಳಗುವ
ನನ್ನ ಮನದ ಹಣತೆ
ಯಾವ ಬಿರುಗಾಳಿಗೂ
ಅಂಜದೆ ಉರಿಯುವುದಂತೆ
ಎದೆಯ ನೋವುಗಳಿಗೆಲ್ಲ
ಚಿಕಿತ್ಸೆ ನೀಡುವುದು ಕವಿತೆ
ಕವಿತೆ ಹುಟ್ಟಿದ ಘಳಿಗೆಯಿಂದಲೇ
ತನ್ನ ಬಳಗವ ಕೂಗಿ ಕರೆವುದು
ಅದರ ಮುಖ್ಯ ಅಭಿಲಾಷೆ
ಎಲ್ಲರ ಮನ ತಣಿಸುವುದು
ಎಂಥ ಕವಿತೆ ಒಳ್ಳೆ ಕವಿತೆ
ಎಂಬುದಿಲ್ಲ ಯಾವುದು
ಹೃದಯದಲ್ಲಿ ನಂದಾದೀಪ ಬೆಳಗಿದಂತೆ
ನಿರ್ಭಾವದ ಕತ್ತಲೆ ಓಡಿಸುವುದು
ಒಮ್ಮೆ ಓದಲು ಕವಿತೆ
ಮರೆಸುವುದು ಮನದ ಚಿಂತೆ
ಬೆನ್ನು ತಟ್ಟುವವರು ಹಂಬಲದ ಕವಿತೆ
ಬೆಳೆದು ನೆರವಾಗುವುದು ಮರದಂತೆ
0713ಎಎಂ06052018
*ಅಮು ಭಾವಜೀವಿ*
No comments:
Post a Comment