Saturday, June 22, 2019


*ವಿಹಾರಿಗಳ ಜೊತೆಗೆ*

ರಾತ್ರಿಯದು ಮುಗಿಯುತಿರಲು
ಮೂಡಣದಿ ಬೆಳಕಾಗುತಿರಲು
ವಾಯುವಿಹಾರದ ಹುರುಪಿನಲಿ
ಸಾಗಿತ್ತು ದಾರಿ ಬೆಟ್ಟದ ತಪ್ಪಲಿನಲ್ಲಿ

ಈ ಬಿರು ಬೇಸಿಗೆಯ ಬಿಸಿಲ ಸಹಿಸಿ
ಹೆಬ್ಬಂಡೆಗಳ ನಿಟ್ಟುಸಿರು ತಾಗಿ
ಗಿಡಮರದೆಲೆಗಳೆಲ್ಲ ಬಾಡಿಬತ್ತಿ
ಇಡೀ ನಿಸರ್ಗವೇ ಮೌನತಳೆದಿತ್ತು

ಹಸಿರಿಲ್ಲದ ಬರಡು ಪರಿಸರ
ಬಿಸಿಲ ಝಳಕೆ ನಲುಗಿ ನಿಂತ ಗಿಡಮರ
ಬಾಯಾರಿ ರೋಧಿಸುತಲಿದೆ
ಕಂಬನಿಯೂ ಬಾರದಷ್ಟು ಬತ್ತಿದ ಕಂಗಳಲಿ

ನಿಸರ್ಗವೇ ಕೆತ್ತಿದ ಬಗೆ ಬಗೆಯ
ಶಿಲಾ ಕಲ್ಪನೆಗಳ ಆಸ್ವಾದಿಸುತ
ಕಾಲಿಗಷ್ಟೆ ಇದ್ದ ಹಾದಿಯಲ್ಲಿ
ನವಚೈತನ್ಯವು ಮೂಡಿತು ಮನದಲಿ

ನವಿಲು ಗುಡ್ಡದ ಕುಣಿಯೊಳಗೆ
ನೀರು ತುಂಬಿಸುವ ವಿಹಾರಿಗಳ ಜೊತೆಗೆ
ಕೈ ಜೋಡಿಸಿ ಅಳಿಲ ಸೇವೆಯ ಸಂತೃಪ್ತಿಯಲಿ
ಬೆಳಗಿನುಪಹಾರ ಸವಿದ ಕ್ಷಣ ಮರೆಯಲಾದೀತೆ

ಮೊದಲ ದಿನದ ಈ ಉತ್ಸಾಹ
ದಣಿವ ನೀಗಿ ಮನವ ತಣಿಸಿತು
ಗೆಳೆಯರೊಡನೆ ಕಳೆದ ಘಳಿಗೆ
ನವೋನ್ಮೇಶಶಾಲಿಯಾಗಿತ್ತು

1059ಪಿಎಂ17032019

*ಅಮು ಭಾವಜೀವಿ*

No comments:

Post a Comment