ವಿಘ್ನ ನಿವಾರಕ
ವಿದ್ಯಾಪ್ರದಾಯಕ
ನಮೋ ನಮೋ ಗಣನಾಯಕ
ಗೌರಿಯ ಸುತ
ಗರ್ವ ನಿವಾರಕ
ನಮೋ ನಮೋ ಗಣನಾಯಕ
ಮೊದಲ ಪೂಜಿತ
ಮೂಷಿಕವಾಹನ
ನಮೋ ನಮೋ ಗಣನಾಯಕ
ಗಜವದನನೆ
ಗಣಗಳ ಒಡೆಯ
ನಮೋ ನಮೋ ಗಣನಾಯಕ
ಲಂಬೋದರನೇ
ಲಂಕೆಯೊಡೆಯನ ಸೋಲಿಪನೆ
ನಮೋ ನಮೋ ಗಣನಾಯಕ
ಚಂದ್ರನಿಗೆ ಶಾಪವಿತ್ತು
ಕೃಷ್ಣನಿಗೆ ಪರಿಹಾರ ಕೊಟ್ಟ
ನಮೋ ನಮೋ ಗಣನಾಯಕ
ಕಡುಬು ಪ್ರಿಯನೇ
ಗರಿಕೆ ಬಯಸಿದವನೆ
ನಮೋ ನಮೋ ಗಣನಾಯಕ
ವ್ಯಾಸರ ಶಿಷ್ಯನೇ
ವಿದ್ಯಾಧಿಪನೇ
ನಮೋ ನಮೋ ಗಣನಾಯಕ
ಧರ್ಮದ ಸೇವಕ
ಕರ್ಮದ ದ್ಯೋತಕ
ನಮೋ ನಮೋ ಗಣನಾಯಕ
ಸಂಕಷ್ಟಹರನೇ
ಸಂತುಷ್ಟ ಪ್ರಿಯನೇ
ನಮೋ ನಮೋ ಗಣನಾಯಕ
ಭಕ್ತಿಗೆ ಒಲಿಯುವ
ಮುಕ್ತಿಯ ನೀಡುವ
ನಮೋ ನಮೋ ಗಣನಾಯಕ
ಮೂಜಗ ವಂದಿತ
ಮುಕ್ಕಣ್ಣನ ಸುತ
ನಮೋ ನಮೋ ಗಣನಾಯಕ
ಪಾಪವ ಕಳೆದು
ಪಾವನಗೊಳಿಸು
ನಮೋ ನಮೋ ಗಣನಾಯಕ
ತಂದೆ-ತಾಯಿಗಳೇ ಜಗವೆಂದು
ತಿರುಗಿ ಬಂದ
ನಮೋ ನಮೋ ಗಣನಾಯಕ
ಚತುರ್ಭುಜನೆ
ಚಕಿತ ರೂಪನೇ
ನಮೋ ನಮೋ ಗಣನಾಯಕ
ದರಿದ್ರ ನಿವಾರಕ
ಧರಣಿಯ ಪಾಲಕ
ನಮೋ ನಮೋ ಗಣನಾಯಕ
ಸರ್ವ ರೂಪಕ
ಸಾರ್ವಕಾಲಿಕ
ನಮೋ ನಮೋ ಗಣನಾಯಕ
ಬಾಲರ ಪ್ರಿಯನೇ
ಭವಿಷ್ಯಕಾರನೇ
ನಮೋ ನಮೋ ಗಣನಾಯಕ
0934ಎಎಂ13092018
ಅಮುಭಾವಜೀವಿ
ಚಿತ್ರದುರ್ಗ
No comments:
Post a Comment