*ಬದಲಿಸು ನಿರ್ಧಾರ*
ತೊರೆದು ಹೋಗದಿರು
ತಬ್ಬಲಿ ಮಾಡದಿರು
ನನಗಿಲ್ಲ ಇಲ್ಲಿ ಯಾರೂ
ಪ್ರೀತಿಗಾಗಿ ಹಂಬಲಿಸಿದೆ
ನನಗಾಗ ನೀ ಸಿಕ್ಕಿದೆ
ಬದುಕಲು ಆಸರೆ ಎಂದುಕೊಂಡೆ
ಬೇಡ ಬದುಕಲಿ ಬೇರೇನೂ
ನೀನಿರೆ ಸಾಕು ಕೇಳೆನು ಏನು
ನಿನ್ನ ಒಲವೆ ನೆರಳಲ್ಲವೇನು
ಬಡತನದ ಬೇಗೆಯಲ್ಲಿ
ಬೆಂದು ಬಂದವಳು ನಾನು
ನಿನ್ನ ಮಡಿಲಲಿ ತಂಪು ಬಯಸಿದೆನು
ಬರಿಗೈಯ ಬೊಗಸೆಯಲ್ಲಿ
ಸೋರುವ ಬಯಕೆಗಳ ತಡೆದು
ಜೀವ ಚೇತನವಾಗಿಸಿದ್ದೆ ನೀನು
ಇಂದೇಕೆ ಅದನ್ನೆಲ್ಲ ಮರೆತು
ಬಿಟ್ಟು ಹೋಗೋ ಮನಸ್ಸಾಯ್ತು
ಬದಲಿಸು ಗೆಳೆಯ ನಿನ್ನ ನಿರ್ಧಾರ
ನಮ್ಮಿಬ್ಬರ ಈ ಬಂಧನ
ಜನುಮಗಳ ಅನುಸಂಧಾನ
ಬರಿದಾಗಿಸದಿರು ಈ ಸಂಸಾರ
0222ಪಿಎಂ03052018
*ಅಮು ಭಾವಜೀವಿ*
ಆಶಾದೇವಿ ಕೂಬಾ ಅವರ ಪ್ರತಿಕ್ರಿಯೆ
ಬದಲಿಸು ನಿರ್ಧಾರ ಎಂಥ ನೋವಿನಿಂದ ತನ್ನ ಪ್ರೇಮಿಯನ್ನು ಕೇಳುತ್ತಿದ್ದಾಳೆ ಬಂದೀತೆ ಅವನಿಗೆ ಕನಿಕರ ಇಲ್ಲ ನೋವು ಕೊಡೋದೆ ಅವನ ಕೆಲಸ ಕವನ ತುಂಬಾ ಚೆನ್ನಾಗಿದೆ ಸೂಪರ್ ಆಗಿದೆ 👌👌👌👌🌹
No comments:
Post a Comment