Saturday, June 22, 2019

ಹಳ್ಳಿಯ ಬದುಕು*

ಹಳ್ಳಿಯ ಬದುಕೇ ಆನಂದ
ಹಳ್ಳಿಯ ಜೀವನ ಸ್ವಚ್ಛಂದ

ಮನೆಯ ಮಸುಕಲ್ಲಿಯೇ ಎದ್ದು
ಅಂಗಳ ಸಾರಿಸಿ ರಂಗೋಲಿ ಬಿಡಿಸಿ
ಬಿಂದಿಗೆ ಹೊತ್ತ ನೀರೆಯರು
ಹಳ್ಳಿಯ ಬದುಕಿನ ಸಿರಿ ದೇವಿಯರು

ಹಸು ಕರುಗಳ ಕೈಯಲಿ ಹಿಡಿದು
ಸಗಣಿ ಗಂಜಲಗಳ ತಲೆಯಲ್ಲಿ ಹೊತ್ತು
ನೇಗಿಲ ಹಿಡಿದು ಉಳುವ ಬದುಕು
ಅದುವೇ ಹಳ್ಳಿಯ ಸುಂದರ ಬದುಕು

ಹಬ್ಬ-ಹರಿದಿನಗಳ ಶೃಂಗಾರ
ತಳಿರು ತೋರಣಗಳ ಸಂಸ್ಕಾರ
ಎಲ್ಲರೂ ನಮ್ಮವರೇ ಎಂಬ ಭಾವ
ಅದುವೇ ಹಳ್ಳಿಯ ಬದುಕಿನ ಸ್ವಭಾವ

ಮುಂಜಾನೆಯಿಂದ ರಾತ್ರಿಯವರೆಗೆ
ಒಂದಿಲ್ಲೊಂದು ಸಂಪ್ರದಾಯ
ಅದರಂತೆಯೇ ನಡೆದ ಮನುಜನಿಗೆ
ಸಿಗುವುದು ದೀರ್ಘಾಯುಷ್ಯ

ಗ್ರಾಮೀಣ ಕ್ರೀಡೆಗಳ ಆ ಸೊಗಸು
ಆಡಿದ ಮೇಲೆ ನಿರಾಳ ಮನಸ್ಸು
ಧಾವಂತ ಇಲ್ಲದ ಹಳ್ಳಿಯ ಬದುಕು
ದೊರೆಯಂತೆ ಬದುಕುವ ಈ ಬದುಕು

ಹಳ್ಳಿಯ ಬದುಕು ಕನಸಾಯಿತು
ನಗರ ಸಂಸ್ಕೃತಿ ಹೆಚ್ಚಾಯಿತು
ಸ್ವಚ್ಛಂದದ ಬದುಕು ಕಳೆದೋಯ್ತು
ಒತ್ತಡ ಜೀವನಕ್ಕೆ ಸುಸ್ತಾಯ್ತು

0659ಪಿಎಂ05042018

*ಅಮು ಭಾವಜೀವಿ*

No comments:

Post a Comment