*ಯೌವ್ವನದ ಖುಷಿಯಲ್ಲಿ*
ಈ ನೀಲ ಬಾನಿನ
ಚಿತ್ತಾರದ ಮೋಡಗಳಲ್ಲಿ
ಮೂಡಿತ್ತು ಗೆಳತಿ ನಿನ್ನ ರೂಪ
ಹೊಳೆವ ಸೂರ್ಯನ ಕಿರಣಗಳ
ಹೊಂಬಣ್ಣವನ್ನೆಲ್ಲ ಮೆತ್ತಿಕೊಂಡು
ಯೌವ್ವನದ ಖುಷಿಯಲ್ಲಿ ಮಿಂದಿತು ಛಾಪ
ಮಿನುಗುವ ಈ ನಯನಗಳು
ಹೊಳೆವಂತೆ ಬಾನ ತಾರೆಗಳು
ರಾತ್ರಿ ಹೇಳಿದಂತೆ ನಿನ್ನ ಮುಂಗುರುಳು
ಕೆನ್ನೆ ಮೇಲಿನ ಗುಳಿಯಲ್ಲಿ
ಜಾರಿಬಂದ ಚಂದಿರನಲ್ಲಿ
ಚೆಲ್ಲಿ ನಗೆಯ ಬೆಳದಿಂಗಳು
ತೀಡುವ ತಂಗಾಳಿ ಕೂಡ
ಈ ಸ್ಪರ್ಶಕ್ಕೆ ವಶವಾಗಿ ಸೋತು
ತಂಪಾಗಿ ಹಾಗೇ ಜಾರಿ ಹೋಯಿತು
ವಿರಹ ತಾಳದ ತನವು
ಸನಿಹ ಬೇಡುತ ಕ್ಷಣವೂ
ನಿದ್ರೆಯ ಜೊಂಪಲ್ಲಿ ಜಾರಿತು
ಕಣ್ಣುಮುಚ್ಚಿದರೆ ಇರುಳು
ಮತ್ತೆ ತೆರೆಯಲು ಹಗಲು
ಗೆಳತಿ ನೀನು ಒಂದು ದಿನದ ಸ್ಪೂರ್ತಿ
ಒಲವ ಪಯಣದ ಜೊತೆಗೆ
ನಿನ್ನ ಸಾಂಗತ್ಯದ ಸಾಲ್ಮರದ ನೆರಳು
ಅಲ್ಲಿ ಮಗುವಾಗಿ ನಡುವೆ ಹಿಡಿದು ಬೆರಳು
0653ಪಿಎಂ22032018
*ಅಮುಭಾವಜೀವಿ*
ಅಂಜಲಿ ತೋರ್ವಿ ಅವರ ಪ್ರತಿಕ್ರಿಯೆ
ನಿಮ್ಮ ಕವನಗಳಲ್ಲಿ ಬಹಳಷ್ಟು, ಆಕ್ರೋಶ ,ನೊಂದ ಮನಸ್ಸಿನ ವೇದನೆ ಕಾಣುತ್ತಿತ್ತು ಮೊದಲೆಲ್ಲ, ಈಗ ಸ್ವಲ್ಪ ಬದಲಾವಣೆ ಆಗಿದೆ ಅನಿಸುತ್ತದೆ ಇತ್ತೀಚಿನ ಕವನಗಳನ್ನು ಓದಿದಾಗ👍
No comments:
Post a Comment