ನೀನಿಲ್ಲದ ಬೇಸರ
ಈ ಬೇಸರ ನನ್ನ ಕುಕ್ಕಿಕುಕ್ಕಿ
ಮನಸ್ಸನ್ನು ಘಾಸಿಗೊಳಿಸುತ್ತಿದೆ
ನೀನಿಲ್ಲದ ಪ್ರತಿ ಕ್ಷಣವ ಕಳೆಯಲು
ನನ್ನ ಈ ಮನ ರೋಸಿಹೋಗಿದೆ
ಎಷ್ಟು ನೆನಪು ಮಾಡಿಕೊಂಡರು
ನೀ ಜೊತೆ ಇರುವಂತೆ ಅನಿಸುತ್ತಿಲ್ಲ
ಎಷ್ಟು ಕಷ್ಟವೋ ವಿರಹವೆನ್ನುವುದು
ನನ್ನಿಂದ ಪದಗಳಲ್ಲಿ ಹೇಳಲಾಗುತಿಲ್ಲ
ನಿನ್ನ ಕೋಪ ತಾಣಗಳು ನನ್ನ ಕೆಣಕಿದರೂ
ಮರು ಘಳಿಗೆ ನಿನ್ನ ಸಾಂತ್ವನದ ಮಾತುಗಳು
ನನ್ನೆಲ್ಲ ಅಸಹನೆಯ ಮರೆಸುತಿತ್ತು
ಅದಕಿಂತಲೂ ಘೋರ ನಿನ್ನ ಈ ದೂರ
ಸಹಿಸಲಾರೆ ನಾನೀ ವಿರಹ
ಹುಚ್ಚು ಹಿಡಿಸುತಿದೆ ಈ ಚಡಪಡಿಕೆ
ಬೇಗ ಬಾ ಓ ಬಾಳ ಸಂಗಾತಿ
ನೋಡು ನೀನಿರದ ನನ್ನ ದುಸ್ಥಿತಿ
ಒಂಟಿತನವೆಂಬುದು ಇಷ್ಟೊಂದು ಕ್ರೂರಿಯೇ
ಮೊದಲೆಂದೂ ನಾನಿದನರಿಯೇ
ಇನ್ನು ನನ್ನಿಂದ ಬಿಟ್ಟಿರಲಾಗದು
ಕ್ಷಣವೂ ತಡಮಾಡದೆ ನೀ ಸೇರು ಬಂದು
ಅಮು ಭಾವಜೀವಿ
[7/7, 11:31 AM] ಡಾ ಸುರೇಶ್ ನೆಗಿಲಗುಳಿ: ಅಮು ಭಾವಜೀವಿಯವರ ಭಾವ ಲಹರಿ ಹರಿದಾಡಿದೆ
[7/7, 11:57 AM] +91 84948 17130: *ಅಮು ಸರ್*
*ಪ್ರತೀ ಗಂಡೆಂಬ ದ್ರಾಬೆಯ ಜೀವದ ಭಾವದ ಬೇರನ್ನು ಹಿಡಿದಿರೆ?*
*ಅವಳು ಎಷ್ಟೇ ಕೋಪಿಸಿದರೂ ಅವಳೇ ಬೇಕು. ಕೇವಲ ಅಡಿಗೆ ಮಾಡಲಿಕ್ಕಲ್ಲ, ಕೆಲಸ ಮಾಡಲಿಕ್ಕಲ್ಲ, ಜಗ ಕಾಣುವ ಸಂಸಾರ ಮಾಡಲಿಕ್ಕಲ್ಲ. ಮನ ಕಾಣುವಂತಹ ಪ್ರೀತಿ ಮಾಡಲಿಕ್ಕೆ.*
ಅವಳು ಇರದ ಆ ಕಾಲ, ಬಲ್ಲ ದ್ರಾಬೆಗಳಿಗೇ ಗೊತ್ತು. ವಿರಹದ ಆ ನೋವನ್ನು ಪದವಾಗಿಸಿದ ನಿಮಗೆ ದೊಡ್ಡ ನಮಸ್ಕಾರಗಳು..🙏🙏🙏
[7/7, 12:15 PM] +91 78295 22364: 💐🤝🏾🙏🏿
ಅಮು ಭಾವಜೀವಿಯವರ ಕವನ ವಿರಹದ ಬೇಗೆಯಲಿ ಕಣ್ಣೀರ ಕೋಡಿ ಹರಿಸುತ್ತಿದೆ
ಪ್ರೇಯಸಿ ಇಲ್ಲದ ಕವಿ ಭಾವವು ತುಂಬಾ ಮರಗುತ್ತಿದೆ ಬಿಕ್ಕಿ ಬಿಕ್ಕಿ ಹರಿಯುತ್ತಿದೆ
ಪ್ರೇಯಸಿ ಕಣ್ಮರೆಯಾದಾಗ ಪ್ರೇಯಸಿ ನೆನಪು ಎಡಬಿಡದೆ ಕಾಡುತ್ತಿದೆ ಅಲ್ವಾ ಸರ್
ವಿರಹವನ್ನು ವರ್ಣಿಸಲು ಪದಗಳೆ ಸಾಲುತ್ತಿಲ್ಲ ಅಲ್ವಾ ಸರ್ ಇದು ನಿಜ
ನಿರ್ಮಲ ಪ್ರೀತಿಯಲ್ಲಿ ಕೋಪ ತಾಪಗಳು ಕ್ಷಣಿಕ ಸರ್ ಹುಂಡು ಮಲಗುವ ತನಕ ಅಂತರಲ್ಲ ಹಾಗೆ
ಸಹಿಸಿಕೊಳ್ಳದ ವಿರಹವನ್ನು ಎನ್ನುವಾದರೆ ಎಷ್ಟು ಪ್ರೀತಿಯ ನೀವು ಮಾಡಿರಬೇಕು ನಾ ಕಾಣೆ
ಒಂಟಿತನವೆ ಕ್ರೂರ ಸರ್
ಉತ್ತಮ ಕವನ ಧನ್ಯವಾದಗಳು ಶುಭವಾಗಲಿ
ಪ್ರೇಮಾರ್ಜುನ
No comments:
Post a Comment