Friday, June 21, 2019

ನೀನಿರದ ಈ ಸಂಜೆ
ಹಿತವಿಲ್ಲ ನನಗೆ
ಬಾ ಗೆಳತಿ ನನ್ನೊಂದಿಗೆ
ನೂರು ನೋವ ಮರೆಯೋಣ
ಇರುಳಿನಲ್ಲಿ ಜಾರೋಣ
ಬೆಳದಿಂಗಳು ಹಾಸಿದೆ ನಮಗಾಗಿ

ಚುಕ್ಕಿಗಳ ಜೊತೆಯಲ್ಲಿ
ತಂಗಾಳಿಯಲ್ಲಿ ತೇಲಿ
ಪೈರಿನಂತೆ ನಲಿಯೋಣ
ನೈದಿಲೆಯ ಮೆಲ್ಮಲಗಿ
ನಲ್ಮೆಯಲಿ ಮಾತಾಡಿ
ಆ ಸ್ವರ್ಗದಲ್ಲಿ ತೇಲೋಣ

ಎದೆ ಭಾವಕೆ ದನಿಯಾಗಿ
ಆನಂದಿಸೋಣ ಜೊತೆಯಾಗಿ
ಈ ಇರುಳು ಎಲ್ಲವೂ ನಮ್ಮದೇ
ಬೇಡ ನಮಗೆ ಚಿಂತೆ
ನಾವಿರೋಣ ಗಂಧರ್ವರಂತೆ
ನಾಳೆಗಿರಲಿ ನೆಮ್ಮದಿ

ಸಹಿಸಲಾರೆ ಒಂಟಿತನ
ನನಗೆ ಬೇಕು ಗೆಳೆತನ
ದೂರವಿರಿಸೋಣ ವಿರಹವನ್ನ
ನನಗೆ ನೀನು ನಿನಗೆ ನಾನು
ಈ ಪ್ರೀತಿಯೇ ಸವಿಜೇನು
ನಮ್ಮದಾಗಲಿ ನವಜೀವನ

4:30 ಪಿಎಂ 15 1 2019
*ಅಮುಭಾವಜೀವಿ*

   

No comments:

Post a Comment