Saturday, June 22, 2019

*ಇನ್ನೂ ಉಳಿದಿದೆ ?*

ಇನ್ನೂ ಉಳಿದಿದೆ
ಮೂಡನಂಬಿಕೆಯ ಬೇರು
ಅದರಿಂದ ಆಗುವುದೆಂತು
ನಮ್ಮೀ ಜನ ಪಾರು

ಪ್ರಾಣಿಬಲಿಗೆ ಬೇಲಿಯೇ ಇಲ್ಲ
ಮಾಟದ್ದುಗಳಿಗೆ ಸರಹದ್ದುಗಳೇ ಇಲ್ಲ
ಅಲ್ಲಿ ಇಲ್ಲಿ ನಡೆಯುತ್ತಿವೆ ನರಬಲಿ
ಆದರೂ ಕಾನೂನು ಜಾಗೃತವಾಗಲಿಲ್ಲ ಏಕೆ ಇಲ್ಲಿ

ದಯ ಇರುವ ದೇವರಿಗೆ
ಬೇಕಿಲ್ಲ ಬಲಿಯಲ ನೈವೇದ್ಯ
ಮೂಢ ಜನರ ಮಾತಿನಿಂದ
ಮೆರೆದಾಡಿದೆ ಅದರ ಅಟ್ಟಹಾಸ

ತನ್ನ ಶ್ರೇಯಸ್ಸಿಗಾಗಿ
ಇತರರ ಭವಿಷ್ಯ ಹಾಳು ಮಾಡಿ
ಅವರ ನೋವು ಆಕ್ರಂದನದಲ್ಲಿ
ಕಾಣಬೇಕೆ ಆನಂದವನ್ನು

ಎಲ್ಲೆ ಇಲ್ಲದೆ ಬೆಳೆದರು
ಮನುಕುಲ ಇನ್ನೂ
ಮೂಢ ಜಾಡ್ಯಗಳ ಮಡುವಿನಲ್ಲೇ
ಸಿಲುಕಿ ಒದ್ದಾಡುತ್ತಿದೆಯಲ್ಲ

ಸಾಕು ಸಾಕು ಈ
ಅಸಭ್ಯತೆಯ ಪೋಷಾಕು
ಈ ಜಗ ಪ್ರಜ್ಞಾವಂತರ
ಪವಿತ್ರ ತಾಣವಾಗಬೇಕು

*ಅಮುಭಾವಜೀವಿ*
   

No comments:

Post a Comment