ಸೂರೊಂದನು ಕಟ್ಟಬೇಕಿದೆ
ಕವಿತೆಯೊಳಗೆ ಮುಟ್ಟಬೇಕಿದೆ
ನೊಂದ ಜೀವಗಳ
ನೆಮ್ಮದಿಯ ನೆರಳ
ಬೆರಳ ಹಿಡಿದು ಕರೆದು
ಮರೆಸುವ ಸಾಂತ್ವನದ
ಸೂರೊಂದನು ಕಟ್ಟಬೇಕಿದೆ
ಕವಿತೆಯೊಳಗೆ ಮುಟ್ಟಬೇಕಿದೆ
ಅಸಹಾಯಕ ಬದುಕಿಗೆ
ಆಸರೆಯ ಕೈಚಾಚಿ
ಅನುಬಂಧ ಬೆಸೆಯುವ
ಅನುಕಂಪದ ಅಪ್ಯಾಯತೆಯ
ಸೂರೊಂದನು ಕಟ್ಟಬೇಕಿದೆ
ಕವಿತೆಯೊಳಗೆ ಮುಟ್ಟಬೇಕಿದೆ
ಅಬಲರ ಬೆಂಬಲವಾಗಿ
ಬದುಕುವ ಹಂಬಲ ತುಂಬಿ
ಕನಸುಗಳ ಬಿತ್ತುತ
ಭರವಸೆಯ ಹೊಸ ನಿರೀಕ್ಷೆಯ
ಸೂರೊಂದನು ಕಟ್ಟಬೇಕಿದೆ
ಕವಿತೆಯೊಳಗೆ ಮುಟ್ಟಬೇಕಿದೆ
ಪ್ರೀತಿಗಾಗಿ ಹಲುಬುವ
ಅಸಂಖ್ಯಾತ ಜೀವಸಂಕುಲವ
ಅಪ್ಪುಗೆಯ ಆಶ್ರಯ ನೀಡಿ
ಪೊರೆವ ಪರಂಪರೆಯ
ಸೂರೊಂದನು ಕಟ್ಟಬೇಕಿದೆ
ಕವಿತೆಯೊಳಗೆ ಮುಟ್ಟಬೇಕಿದೆ.
೧೧೩೩ಎಎಂಂ೮೧೨೨೦೧೬
ಅಮು ಭಾವಜೀವಿ
No comments:
Post a Comment