ಈಸಂಜೆ ಕೂಡ ರಂಗೇರಿದೆ
ನಲ್ಲೆ ನಿನ್ನ ಕೆನ್ನೆ ಮೇಲೆ
ದೂರದಲ್ಲೆಲ್ಲೋ ಇಳಿಯುತ್ತಿದೆ
ಇರುಳು ನಿನ್ನ ಮುಂಗುರುಳಿನಂತೆ
ತಂಗಾಳಿ ಕೂಡ ತೀಡುತ್ತಿದೆ
ನಿನ್ನ ಮುಗುಳ್ನಗೆ ಲಾಸ್ಯದಲ್ಲಿ
ತಾರೆಗಳೆಲ್ಲವೂ ಮಿನುಗುತ್ತಿವೆ
ಮಲ್ಲಿಗೆ ಮುಡಿದ ಈ ಮುಡಿಯಲ್ಲಿ
ಬೆಳದಿಂಗಳು ಹರಡಿದಂತಿದೆ
ನಿನ್ನ ಈ ವದನದಲ್ಲಿ
ಸೂರ್ಯ ಚಂದ್ರರು ಕಂಗೊಳಿಸಿದಂತೆ
ಹೊಳೆವ ನಿನ್ನ ಈ ನಯನಗಳಲ್ಲಿ
ಅರಗಿಳಿಯೂ ತಾ ನುಡಿದಂತೆ
ನಿನ್ನ ಮಾತಿನ ಪಲುಕು
ನವಿಲು ಗರಿ ಬಿಚ್ಚಿ ಕುಣಿದಂತೆ
ನಲ್ಲೆ ನಿನ್ನ ನಾಟ್ಯದ ಬಳುಕು
ಹರಿವ ನೀರ ಧಾರೆ
ನೀನಿತ್ತ ಸ್ಪರ್ಶ ಸುಖ
ಚೈತ್ರ ಅದು ಬಂದಂತೆ
ನಿನ್ನ ಯೌವನ ಆಕರ್ಷಕ
ನಿನಗೆ ನಾನು ಒಲಿದೆ
ನನಗೇನೂ ತಿಳಿಯದಂತೆ
ನಿನ್ನ ಸ್ನೇಹ ಸಿಕ್ಕ ಗಳಿಗೆ
ಸ್ವರ್ಗವೇ ನನ್ನ ಪಾಲಾದಂತೆ
0555ಪಿಎಂ17032018
ಅಮು ಭಾವಜೀವಿ
No comments:
Post a Comment