Friday, June 21, 2019

ಒಲವಿನ ಚಂದನ ಮುಂದುವರಿದ ಭಾಗ ೭.........

ಇಲ್ಲಿಯವರೆಗೆ...........

ಆಕಾಶ್ ಬೆಳಗಿನ ಜಾವ ಕಂಡ ಕನಸು ಅವನೊಳಗೆ ಹೊಸತನವನು ತಂದಿತ್ತು. ಉದಯ್ ಆಕಾಶನನ್ನು ಬೆಳಗಾಯ್ತೆಂದು ಎಬ್ಬಿಸುತ್ತ , ಬೆಳಗಿನ ಎಲ್ಲಾ ಕನಸು ನಿಜವಾಗಲ್ಲ ಎಂದು ಹೇಳಿ ತನ್ನ ಕೆಲಸಕ್ಕೆ ಹೊರಟ.......

ಮುಂದೆ........

     ಬೆಳಗಿನ ಜಾವದ ಕನಸುಗಳನ್ನು ಕಂಡ ಆಕಾಶ್ ಹೊಸ ಉತ್ಸಾಹದಿಂದ ಜೀವನದಲ್ಲಿ ಏನೋ ಸಾಧನೆ ಮಾಡಿದವನಂತೆ ಖುಷಿಯಿಂದ ನಿತ್ಯ ಕರ್ಮಗಳನ್ನು ಮುಗಿಸಿ ಆಫೀಸ್ಗೆ ಹೋಗಲು ಅಣಿಯಾದನು. ಅವನು ಆಫೀಸ್ ಸೇರುವಷ್ಟರಲ್ಲಿ ಸ್ನೇಹಿತರೆಲ್ಲ  ತಮ್ಮ ತಮ್ಮ  ವಾಹನಗಳಲ್ಲಿ ಬಂದು ಪಾರ್ಕಿಂಗ್ ಲಾಟ್ ಅಲ್ಲಿ ನಿಲ್ಲಿಸಿ ಕಚೇರಿಯೊಳಗೆ ಹೋಗುತ್ತಿದ್ದರು. ಆಕಾಶ್ ಬಂದದ್ದನ್ನು ನೋಡಿ ಎಲ್ಲರು ವಿಶ್ ಮಾಡಿದರು. ರವಿ ಆಕಾಶ ನನ್ನ ಕುರಿತು "ಎಷ್ಟು ಬೇಗ ಬರ್ತೀಯೋ ನೀನು, ನಾವು ನಮ್ಮ ಸಂತ ವೆಹಿಕಲ್ ಅಲ್ಲಿ ಬಂದರು ಸಹ ನಿನ್ನಷ್ಟು ಬೇಗ ಬರೋದಿಕ್ಕೆ ಆಗಲ್ಲ" ಎಂದಾಗ, ಅದು ಆಗಲ್ವೋ ಮಹರಾಯ, ನಾವೇ ಮಾಡಿಕೊಳ್ಳಬೇಕು. ಎನ್ನುತ್ತಾ ಆಕಾಶ್ ಎಲ್ಲರಿಗೂ ಗುಡ್ ಮಾರ್ನಿಂಗ್ ಹೇಳುತ್ತಾ ತನ್ನ ಛೇಂಬರ್ ಒಳಗೆ ಹೋಗಿ ತನ್ನ ಕೆಲಸವನ್ನು ಪ್ರಾರಂಭಿಸಿದನು. ಅಷ್ಟರೊಳಗೆ ಬಿಳಿಯ ಸ್ಕೂಟಿಯ ಮೇಲೆ ಆಕಾಶ ನೀಲಿ ಬಣ್ಣದ ಡ್ರೆಸ್ ಹಾಕ್ಕೊಂಡು ಚಂದನ ಅಕ್ಷರಶಃ ಅಪ್ಸರೆಯಂತೆ ಕಾಣುತ್ತಿದ್ದ ಚಂದನಳನ್ನು ಗಮನಿಸಿದ ಆಕಾಶ್ ತನ್ನನ್ನೇ ತಾನು ಮರೆತು ಅವಳನ್ನೇ ನೋಡುತ್ತಾ ಕುಳಿತುಕೊಂಡ. ಒಳಗೆ ಬಂದ ಚಂದನ ಎಲ್ಲರಿಗೂ ವಿಶ್ ಮಾಡಿದಳು. ಅವಳ ಸ್ನೇಹಿತರಿಲ್ಲ "ಹೇಗಿದ್ದೀಯ ಚಂದನ ಈಗ ಹುಷಾರ್ ಆಗಿದ್ದೀಯ ತಾನೇ" ಎಂದು ಕೇಳಲು ಎಲ್ಲರಿಗೂ ತಾನೀಗ ರಾಮ್ ಆಗಿದ್ದೀನಿ ಎಂದು ಹೇಳುತ್ತಾ ಆಕಾಶವನ್ನು ವಾರೆನೋಟದಿಂದ ನೋಡಿ 'ನೋಡು ಹೇಗೆ ಕುಳಿತಿದ್ದಾನೆ. ಎಲ್ಲರೂ ನನಗೆ ವಿಶ್ ಮಾಡಿ ಆರೋಗ್ಯ ವಿಚಾರಿಸಿದರು. ಇವನು ಮಾತ್ರ ಸುಮ್ಮನೆ ಕುಳಿತಿದ್ದಾನೆ, at least ವಿಶ್ ಮಾಡಕಾದರೂ ಆಗುತ್ತಿಲ್ಲ ಅವನಿಗೆ ' ಎಂದುಕೊಳ್ಳುತ್ತಾ ತನ್ನ ಕ್ಯಾಬೀನಿನತ್ತ ನಡೆದಳು.

     ತಾನು ಕನಸಿನಲ್ಲಿ ಕಂಡ ಚೆಲುವೆಯೇ ಎದುರಿಗೆ ಬಂದು ನಿಂತಂತೆ ಭಾಸವಾಗಿ ಹೃದಯದ ತನ್ನ ಅರಮನೆಗೆ ಅವಳನ್ನು ಸ್ವಾಗತಿಸಿಕೊಂಡು ಅವಳ ಅಂದಕೆ ಪೂರ್ತಿ ವಶವಾಗಿ ಹೋಗಿದ್ದಾನೆ ಆಕಾಶ್. ತಾನು ಯಾವುದೋ ಲೋಕದಲ್ಲಿ ಇದ್ದೇನೆ ಎಂದುಕೊಂಡಿದ್ದ ಆಕಾಶ್ ಒಮ್ಮೆಲೆ ಎಚ್ಚರವಾದಂತೆ , ಹಾಯ್ ಚಂದನ ಗುಡ್ ಮಾರ್ನಿಂಗ್ ಹೇಗಿದ್ದೀರಾ ಎಂದು ಕೇಳಿದನು. ಅದಕ್ಕೆ ಚಂದನ ಅದೇ ಸಿಡುಕು ಮೂತಿಯಿಂದ 'ಪರ್ವಾಗಿಲ್ಲ' ಎಂದಳು. ಅದಕ್ಕೆ ಆಕಾಶ್ ಇನ್ನು ಒಂದು ದಿವಸ ರೇಸ್ಟ್ ತಗೋಬಹುದಿತ್ತು. ನಾವೆಲ್ಲ ನಿಭಾಯಿಸುತ್ತಿದ್ದೆವು ಎಂದನು. ಹ್ಞಾ,, ಒನ್ ತಿಂಗಳು rest ತೆಗೆದುಕೊಳ್ಳಿ ಎಂದಿದ್ದೆ ಈಗ ಒಂದೇ ದಿನ ಸಾಕಾ ? ಎಂದಳು. 'ನಿನ್ನಂತ ಚೆಲುವೆನಾ ದಿನವಲ್ಲ ಒಂದು ಕ್ಷಣನೂ ಬಿಟ್ಟಿರಲು ಆಗುವುದಿಲ್ಲ ಚಂದನ ' ಎಂದು ಗೊಣಗಿದನು. ಏನೋ ಅಂದಿರಿ ಎಂದು ಕೇಳಲು ಏನಿಲ್ಲ ಬಿಡಿ, ನೀವು ತುಂಬಾ ಹಾಗೆ ಮಾಡಲ್ಲ ಅಂತ ಗೊತ್ತಿತ್ತು ಅದಕ್ಕೆ ಹಾಗೆ ಹೇಳಿದೆ ಎಂದ ಆಕಾಶ್ . ಎಲ್ಲರೂ ಅವರವರ ಕಾರ್ಯದಲ್ಲಿ ಮಗ್ನರಾಗಿದ್ದರು. ಬಾಸ್ ಕ್ಯಾಬಿನ್ನಿಂದ ಆಕಾಶವೇ ಕರೆ ಬಂತು. ತಕ್ಷಣ ಆಕಾಶ್ ಕ್ಯಾಬಿನ್ ಗೆ ಹೋದನು." ಬನ್ನಿ ಬನ್ನಿ ಆಕಾಶ್ ಕುಳಿತುಕೊಳ್ಳಿ ಎಂದು ಶಶಿಕಾಂತ್ ಹೇಳಲು " ಏನ್ ಸರ್ ಏನ್ ವಿಷಯ " ಎಂದು ಕೇಳಿದ ಆಕಾಶ್. ಏನಿಲ್ಲ ಆಕಾಶ್ ಅರ್ಜೆಂಟಾಗಿ ಇವತ್ತು ಮಧ್ಯಾಹ್ನ ಮೈಸೂರಲ್ಲಿ ಒಂದು ಮುಖ್ಯವಾದ ಮೀಟಿಂಗ್ ಇದೆ. ಅದನ್ನು ನೀನೆ ಅಟೆಂಡ್ ಮಾಡಬೇಕು. ನನಗೆ ಬೇರೆ ಕೆಲಸ ಇದೆ ಎಂದು ಸಂಬಂಧಪಟ್ಟ ಫೈಲ್ಗಳನ್ನು ಆಕಾಶನಿಗೆ ಹೇಳಿದರು ಶಶಿಕಾಂತ್. ಆಫೀಸ್ ಇಂದಾನೆ ಕಾರ್ ತೆಗೆದುಕೊಂಡು ಹೋಗು ಡ್ರೈವರಿಗೆ ಹೇಳಿದ್ದೇನೆ ಎಂದು ಹೇಳಿ ಅವನನ್ನು ಬೀಳ್ಕೊಟ್ಟರು.

        ಕ್ಯಾಬಿನ್ ಇಂದ ಹೊರಗೆ ಬಂದ ಆಕಾಶನನ್ನು ಅಲ್ಲೇ ಇದ್ದ ಶ್ರೀಮತಿ ಏನು ವಿಷಯ ಆಕಾಶ್ ಎಂದು ಕೇಳಿದಳು. ಏನಿಲ್ಲಾ ಅರ್ಜೆಂಟಾಗಿ ಮೀಟಿಂಗ್ ವಿಷಯವಾಗಿ ಮೈಸೂರಿಗೆ ಹೋಗ್ಬೇಕಂತೆ ಅಷ್ಟೇ ಎಂದನು. ನೀವು ಬಿಡಪ್ಪ ತುಂಬಾ ಲಕ್ಕಿ, ಹೋಗಿ ಬನ್ನಿ ಹಾಗೆ ಹೇಗೋ ಮೈಸೂರಲ್ಲಿ ದಸರಾ ನಡಿತಾ ಇದೆ ನೋಡ್ಕೊಂಡು ಬನ್ನಿ ಎಂದು ಹೇಳಿದಳು. ನೋಡೋಣ ಬಿಡುವು ಸಿಕ್ಕರೆ ನೋಡಿಕೊಂಡು ಬರ್ತೀನಿ ಎಂದು ಹೇಳುತ್ತಾ ತನ್ನ ಬ್ಯಾಗನ್ನು ಹೆಗಲಿಗೇರಿಸಿಕೊಂಡು ಡ್ರೈವರ್ ನನ್ನ ಮಾತಾಡಿಸುತ್ತಾ ಹೊರ ನಡೆದನು.

   

No comments:

Post a Comment