*ಭಾಗ್ಯಕಿರಣ*
ದಟ್ಟ ಕಾನನದ ಪುಟ್ಟ ಗೂಡಲ್ಲಿ
ಮೊಟ್ಟೆಯೊಡೆದು ಬಂತೊಂದು ಪ್ರಭೆ
ಕನ್ನಡ ಸಾಹಿತ್ಯ ಲೋಕದಿ ಬೆಳಗಿತು
ಕುಪ್ಪಳ್ಳಿ ನೆಲದ ಅಗಾಧ ಪ್ರತಿಭೆ
ಈ ಚೇತನವಾಯಿತು ಅನಿಕೇತನ
ಕನ್ನಡಕೆ ಒಲಿದು ಭಾಗ್ಯ ಕಿರಣ
ಮನುಜ ಮತ ವಿಶ್ವ ಪಥ ವೆಂದು
ಸಾರಿದ ವಿಶ್ವಮಾನವ ಈತ
ಆಡು ಮುಟ್ಟದ ಸೊಪ್ಪಿಲ್ಲ
ಕುವೆಂಪು ಬರೆಯದ ಸಾಹಿತ್ಯವಿಲ್ಲ
ವೈಚಾರಿಕ ನೆಲೆಯಲ್ಲಿ ನಡೆದ
ಜಗದ ಯುಗದ ರಾಷ್ಟ್ರಕವಿ
ಮಾನಸಗಂಗೋತ್ರಿಯ ಜನಕ
ಜ್ಞಾನಪೀಠ ಪಡೆದ ಸಾಧಕ
ಜನಮನದಲ್ಲಿ ಉಳಿದ ಕನ್ನಡ ರತ್ನ
ಪದಗಳಲ್ಲಿ ಬಣ್ಣಿಸಲಾಗದು ಅವರ ಸಾಧನೆಯನ್ನ
ರಸಋಷಿಯ ಸವಿನೆನಪು
ದಾರಿದೀಪ ಪ್ರತಿ ಸಾಧಕನಿಗೆ
ನಾಡುನುಡಿಗೆ ಕೊಟ್ಟ ಕೊಡುಗೆ
ಅನನ್ಯ ಅಸಾಧಾರಣ ಛಾಪು
ನಮನ ನಿನಗೆ ವಿಶ್ವ ಮಾನವ
ಕೈ ಹಿಡಿದು ನೀ ನಡೆಸು ಓ ದೈವ
ಸಾಧನೆಯ ಮೇರು ಶಿಖರ
ಕವಿಶೈಲದಿ ನೀವಾದಿರಿ ಅಮರ
ಅಮು ಭಾವಜೀವಿ
No comments:
Post a Comment