Saturday, June 22, 2019

ಅರಳುವ ಮುನ್ನವೇ

Thursday, October 12, 2017

ಕಥೆ ೧ ಅರಳುವ ತಾವರೆ ಇನ್ನು ನಾನು ಬದುಕುವುದರಲ್ಲಿ ಅರ್ಥವಿಲ್ಲ. ಪ್ರೀತಿಗಾಗಿ ಹಂಬಲಿಸಿ ಬಂದವನೇ ಪ್ರೀತಿಯನ್ನು ತೊರೆದು ಮನೆಯಲ್ಲಿ ನೋಡಿದವಳೊಂದಿಗೆ ಮದುವೆ ತಯಾರಿ ನಡೆಸುತ್ತಿರುವಾಗ ನಾನು ನನ್ನ ಪ್ರೀತಿಯ ವಿಷಯವನ್ನಿಟ್ಟುಕೊಂಡು ಮದುವೆ ನಿಲ್ಲಿಸಲು ಹೋದರೆ ನಮಗಲ್ಲಿ ಬೆಂಬಲ ಕೊಡುವವರಾರು. ಅವನ ಇಡೀ ಕುಟುಂಬವೇ ಸಂಭ್ರಮದಲ್ಲಿ ತೇಲಿರುವಾಗ ಅದನ್ನು ನೋಡಿ ನೊಂದುಕೊಳ್ಳುವುದಕ್ಕಿಂತ ನಾನು ಸತ್ತು ನೆಮ್ಮದಿಯಾಗಿರಬೇಕೆಂದುಕೊಂಡು ಸರಸರನೆ ಹೆಜ್ಜೆ ಹಾಕಿ ನಡೆದಳು ಸವಿತಾ. ಬದುಕು ಸಾಕಾಗಿದೆ, ಅವಮಾನ ಇನ್ನಿಲ್ಲದಂತೆ ಚುಚ್ಚುತಲಿದೆ. ಅಸಹಾಯಕತೆ ಕೈಚೆಲ್ಲಿ ಕೂತ ಹೆಣ್ಣೊಬ್ಬಳಿಗೆ ಸಾವು ಒಂದೇ ಅಂತಿಮ ಆಯ್ಕೆ. ನೋವನ್ನು ಹಂಚಿಕೊಳ್ಳುಲು ಇದು ಗುಟ್ಟಿನ ವಿಷಯ. ಮನೆಯಲ್ಲಿ ಯಾರಿಗೂ ಗೊತ್ತಿಲ್ಲ. ಸ್ನೇಹಿತರಾರಿಗೂ ಈ ಬಗ್ಗೆ ಸಣ್ಣ ಸುಳಿವೂ ನೀಡಿರಲಿಲ್ಲ. ಅವನು ಹೇಳಿದ ತಾಳಕ್ಕೆ ಕುಣಿದ ತಪ್ಪಿಗೆ ಇಂದು ಅಕ್ಷರಶಃ ಒಬ್ಬಂಟಿಯಾಗಿ ನಿಂತಿದ್ದಾಳೆ ಸವಿತಾ. ಈಗ ಈ ವಿಷಯವನ್ನು ಮನೆಯಲ್ಲಿ ಹೇಳಿದರೆ ಇಷ್ಟು ದಿನ ಅಪ್ಪ ಅಮ್ಮ ನನ್ನ ಮೇಲಿಟ್ಟಿದ್ದ ನಂಬಿಕೆ ಸುಳ್ಳಾಗುತ್ತದೆ. ನಾವು ಕೊಟ್ಟ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಂಡಿದ್ದಾಳೆ, ಒಬ್ಬಳೇ ಮಗಳು ಎಂದು ಸುಖವಾಗಿ ಸಾಕಿದ್ದಾಗಿ ಒಳ್ಳೆಯ ಬಹುಮಾನವನ್ನೇ ಕೊಟ್ಟಿದ್ದಾಳೆ ಎಂದು ನೊಂದುಕೊಳ್ಳುತ್ತಾರೆ. ಈಗ ಈ ಪರಿಸ್ಥಿತಿಯಲ್ಲಿ ಅಪ್ಪ ಅಮ್ಮನಿಗೆ ಮುಖ ತೋರಿಸಲೂ ಅಂಜಿಕೆಯಾಗುತ್ತಿದೆ. ಇನ್ನು ಸ್ನೇಹಿತರ ಬಳಿ ಹೇಳಿಕೊಳ್ಳೋಣವೆಂದರೆ ಇಷ್ಟು ದಿನ ಗುಟ್ಟಾಗಿಟ್ಟಿದ್ದವಳು ಈಗ ಮೋಸ ಆಗಿರುವುದಕ್ಕೆ ನಮ್ಮ ಬಳಿ ಗೋಳಾಡುತ್ತಾಳೆ ಎಂದು ಆಡಿಕೊಂಡು ನಕ್ಕರೆ ಅದಕ್ಕಿಂತಲೂ ಅವಮಾನ ಮತ್ತೊಂದಿಲ್ಲ. ಇದನ್ನೆಲ್ಲಾ ಆಲೋಚನೆ ಮಾಡಿಕೊಳ್ಳಲು ತ್ತಾರೆ ನಡೆದವಳಿಗೆ ಮನೆಗೆ ಹೋಗುವುದೇ ಬೇಡ ಸ್ನೇಹಿತರಿಗೆ ಕಾಣಿಸಿಕೊಳ್ಳುವುದೇ ಬೇಡ ಎಂದುಕೊಂಡು ಯಾರಿಗೂ ಕಾಣದಂತೆ ಎಲ್ಲಾದರೂ ದೂರ ಹೋಗಬೇಕೆನಿಸಿ ಬಸ್ಟ್ಯಾಂಡಿಗೆ ಬಂದವಳೇ ಯಾವುದೋ ಯೋಚನೆಯಲ್ಲಿ ಬಂದು ಯಾವುದೋ ಬಸ್ ಹತ್ತಿ ಕೂತಿದ್ದಳು. ಕಂಡಕ್ಟರ್ ಬಂದು ಎಲ್ಲಿಗೆ ಎಂದು ಕೇಳುವವರೆಗೂ ಆಕೆ ತಾನೆಲ್ಲಿದ್ದೇನೆ,ಎಲ್ಲಿಗೆ ಹೋಗುತ್ತಿದ್ನೇನೆ, ತಾನು ಹತ್ತಿರುವ ಬಸ್ ಎಲ್ಲಿಗೆ ಹೋಗುತ್ತದೆ ಎಂಬುದನ್ನು ಗಮನಿಸಿಯೇ ಇರಲಿಲ್ಲ. ಕಂಡಕ್ಟರ್ "ಎಲ್ಲಿಗೆ ಹೋಗಬೇಕಮ್ಮಾ ನೀನು,ಟಿಕೆಟ್ ತಗೋ ದುಡ್ಡು ಕೊಡು" ಎಂದಾಗಲೇ ಆಕೆ ಬರಿಗೈಯಲ್ಲಿ ಬಂದು ಬಸ್ ಹತ್ತಿ ಕೂತಿರುವುದು ಅವಳ ಗಮನಕ್ಕೆ ಬಂತು.ಗಲಿಬಿಲಿಗೊಂಡವಳಂತೆ 'ಈ ಬಸ್ ಎಲ್ಲಿಗೋಗುತ್ತೆ ಅಣ್ಣಾ ನಾನು ಯಾವುದೋ ಸಮಸ್ಯೆಯ ಸುಳಿಗೆ ಸಿಕ್ಕು ಮನೆಬಿಟ್ಟು ಬಂದಿದ್ದೇನೆ ಅಣ್ಣಾಜಿ. ನನ್ನ ಹತ್ತಿರ ಏನೂ ಇಲ್ಲ ದಯವಿಟ್ಟು ಮುಂದಿನ ನಿಲ್ದಾಣದಲ್ಲಿ ನನ್ನ ಇಳಿಸಿ ಅಣ್ಣಾ' ಎಂದು ಕೈ ಕೈ ಮುಗಿದು ಬೇಡಿಕೊಂಡಳು.ಬಸ್ಸಿನಲ್ಲಿದ್ದವರೆಲ್ಲ ಅಯ್ಯೋ ಪಾಪ ಎಂದು ಹೇಳಿ ಕಂಡಕ್ಟರನಿಗೆ ಮುಂದಿನ ನಿಲ್ದಾಣದಲ್ಲಿ ಇಳಿಸುವಂತೆ ಹೇಳಿದಾಗ ಅವನು ಏನೇನೋ ಗೊಣಗುತ್ತ ಮುಂದೆ ಹೋದನು. ಸವಿತಾ ದುಃಖವನ್ನು ತಡೆದುಕೊಳ್ಳಲಾಗದೇ ಅಳಲು ಶುರು ಮಾಡಿದಳು. ಅಲ್ಲೇ ಪಕ್ಕದಲ್ಲಿ ಕೂತ ಒಬ್ಬ ನಡುವಯಸ್ಸಿನ ಹೆಂಗಸು ಇವಳನ್ನು ಸಮಾಧಾನ ಪಡಿಸುತ್ತಾ ನಡೆದ ಘಟನೆಯನ್ನೇಲ್ಲಾ ಕೇಳಿಸಿಕೊಂಡಳು. ''ಈಗಿನ ಹುಡುಗಿಯರೇ ಹೀಗೆ. ವಯಸ್ಸಿನ ಚಂಚಲತೆಯಲ್ಲಿ ಬದುಕಿನ ಅರ್ಥವನ್ನೇ ಕರೆದುಕೊಂಡು ಹೀಗೆ ಬೀದಿಗೆ ಬಂದು ಬೀಳುತ್ತಾರೆ'' ಎಂದುಕೊಳ್ಳುತ್ತಾ ಅವಳಿಗೆ ಸಾಂತ್ವನ ಹೇಳಿ ' ಮುಂದೆ ಏನು ಮಾಡಬೇಕೆಂದಿದ್ದೀಯಾ ?' ಎಂದು ಕೇಳಿದಳು ಆ ಹೆಂಗಸು. ಅದಕ್ಕೆ ಸವಿತಾ 'ಗೊತ್ತಿಲ್ಲ ಆಂಟಿ.ಈ ಬದುಕೇ ಸಾಕಾಗಿದೆ. ನಮ್ಮವರಿಂದ ದೂರ ಹೋಗಿ ಸತ್ತಬಿಡಬೇಕೆಂದು ಬಂದೆ. ಆದರೆ ಈಗ ಎಲ್ಲಿಗೆ ಹೋಗಬೇಕು ಎಂಬುದೇ ಗೊತ್ತಾಗ್ಲಿಲ್ಲ ಆಂಟಿ ' ಎಂದು ಪೆಚ್ಚು ಮೋರೆಯಲ್ಲಿ ಹೇಳಿದಾಗ ಸ್ವಲ್ಪ ಗಾಬರಿಗೊಂಡವಳಂತೆ ಆ ಹೆಂಗಸು ಇವಳನ್ನೊಮ್ಮೆ ನೋಡಿ "ಹಾಕ್ತೀನ್ನೋಡು ಒಂದು ಏಟು " ಎನ್ನುತ್ತಾ ತನ್ನ ಕೈಯನ್ನು ಅವಳತ್ತ ಎತ್ತಿ ನಂತರ ಸಮಾಧಾನ ಮಾಡಿಕೊಂಡು "ಅಯ್ಯೋ ಹುಚ್ಚುಡುಗಿ,ಜೀವನ ಅಂದ್ರೆ ಇಷ್ಟೇ ಅಲ್ಲ ಪ್ರೀತಿ ಮಾಡಿ ಮೋಸ ಹೋಗಿ ಜೀವ ಕಳೆದುಕೊಂಡರೆ ನೀನು ಏನು ಸಾಧಿಸಿದಂತಾಯ್ತು?.ನಿನ್ನ ತಪ್ಪಿಲ್ಲದಿದ್ದರೂ ನೀನೇಕೆ ಸಾಯಬೇಕು. ಇನ್ನು ಚಿಕ್ಕ ವಯಸ್ಸು. ಬದುಕಿದ್ದು ಸಾಧಿಸಿ ತೋರಿಸು ಹೀಗೆ ಹೇಡಿಯಂತೆ ಸಾಯುವ ಮಾತನಾಡಬೇಡ " ಎಂದು ಗದರಿಸಿ ಹಾಗೇ ತನ್ನ ಮಡಿಲಲ್ಲಿ ಮಲಗಿಕೊಂಡಳು . ಸವಿತಾ ನಿಜವಾಗಿಯೂ ತನ್ನ ತಾಯಿಯೇ ಈಕೆಯ ರೂಪದಲ್ಲಿ ಬಂದಿದ್ದಾಳೇನೋ ಅಂದುಕೊಂಡು ಅಳುತ್ತಾ ಹಾಗೇ ಕಣ್ಮುಚ್ಚಿದಳು. "ಮಗಳೇ ಏಳು ಊರು ಬಂತು.ಇವತ್ತು ನಮ್ಮ ಮನೆಯಲ್ಲಿಯೇ ಇರುವಂತೆ. ನಾಳೆ ಏನು ಮಾಡಬೇಕು ಎಂದು ಯೋಚಿಸೋಣ" ಎಂದು ಸವಿತಾಳನ್ನು ಆ ಹೆಂಗಸು ತಮ್ಮ ಮನೆಗೆ ಕರೆದುಕೊಂಡು ಹೋದರು .ಸವಿತಾ ಅಂಜಿಕೆಯಿಂದಲೇ ಅವರ ಹಿಂದೆ ಹೆಜ್ಜೆ ಹಾಕಿದಳು . ಆ ಮನೆಯಲ್ಲಿ ಗಂಡ ಹೆಂಡತಿ ಮತ್ತು ಇಬ್ಬರು ಮಕ್ಕಳೊಂದಿಗೆ ಸವಿತಾ ಒಬ್ಬಳಾಗಿರಲು ಆಕೆಯ ಗಂಡ ಒಪ್ಪಿಕೊಂಡರು. ಸರಿ ಮಗಳೆ ನಾಳೆ ನನಗೆ ಗೊತ್ತಿರುವ ಕಡೆ ವಿಚಾರಿಸಿ ನಿಮಗೊಂದು ಕೆಲಸ ಕೊಡಿಸುತ್ತೇನೆ. ಎಷ್ಟೇ ಕಷ್ಟ ಬಂದರೂ ನೀನು ದುಡಿದು ಹಣ ಹೆಸರು ಸಂಪಾದಿಸು ಆದರೆ ಲಕ್ಷಣ ನಿನ್ನ ಮುಖದಲ್ಲಿ ಕಾಣುತ್ತಿದೆ ಎಂದು ಅವಳಿಗೆ ಧೈರ್ಯ ತುಂಬಿದರು. ಅವರ ಎರಡು ಮಕ್ಕಳು ಇವಳನ್ನು ಅಕ್ಕ ಎಂದು ಅಪ್ಪಿ ಮುದ್ದಾಡಿದರು. ಸವಿತಾಳಿಗೆ ಇದನ್ನೆಲ್ಲಾ ನೋಡಿ ನನ್ನ ತಂದೆ ತಾಯಿ ಕೂಡ ಇಷ್ಟೊಂದು ಕಾಳಜಿ ಮಾಡುತ್ತಿದ್ದರೋ ಇಲ್ಲವೋ ಎನ್ನುವಷ್ಟು ಆನಂದ ಆಯಿತು. ಕೊನೆಗೂ ದೇವರು ಒಳ್ಳೆಯ ಕಡೆ ನೆಲೆ ದೊರಕಿಸಿ ಕೊಟ್ಟನೆಂದು ಆನರ್ಸ್ ದೇವರಿಗೆ ಥ್ಯಾಂಕ್ಸ್ ಹೇಳಿ ಕಣ್ಣು ಮುಚ್ಚಿದಳು. ರಾಮಣ್ಣ ಬೆಳಿಗ್ಗೆ ತನ್ನ ಸ್ನೇಹಿತರಲ್ಲಿ ವಿಚಾರಿಸುತ್ತಾ ಅವಳಿಗಾಗಿ ಒಂದು ಕೆಲಸ ಹುಡುಕುವ ಪ್ರಯತ್ನ ಮಾಡುತ್ತಿದ್ದರು.ಜಾನಕಮ್ಮ ಮಕ್ಕಳಿಗೆ ತಿಂಡಿ ತಯಾರಿಸುತ್ತಾ ಅಡುಗೆ ಮನೆಯಲ್ಲಿ ಕೆಲಸದಲ್ಲಿ ನಿರತಳಾಗಿದ್ದರು. ಮಕ್ಕಳು ಆಟವಾಡುತ್ತಾ ಸವಿತಾ ಮಲಗಿದ್ದ ಕೊಠಡಿಗೆ ಓಡಿ ಬಂದರು. ಅಲ್ಲಿ ಇನ್ನೂ ಮಲಗಿದ್ದ ಸವಿತಾಳನ್ನು ನೋಡಿ ''ಏ ಅಕ್ಕ ಮಲಗಿದ್ದಾರೆ ಗಲಾಟೆ ಮಾಡಬೇಡ ಎನ್ನುತ್ತಾ ಇಬ್ಬರು ಆಚೆ ಬರುವಾಗ ರಶ್ಮಿ ಕಾಲು ಜಾರಿ ಬಿದ್ದು ಅಳಲು ಶುರು ಮಾಡಿದಳು.

No comments:

Post a Comment