Friday, June 21, 2019

ಸಾಧನೆಗೂ ಕೂಡ ಸಂಕೋಚ
ಸಾಧಕನ ಹೆಸರಿನೊಂದಿಗೆ ಸೇರಲು
ಜಗವೇ ಮೂಕವಿಸ್ಮಿತ
ಅವರ ಮಧುರ ಗಾನ ಕೇಳುತಿರಲು

ಸಂಗೀತ ಕ್ಷೇತ್ರದ ಅಗ್ರಮಾನ್ಯ
ಈ ಬಾಲಸುಬ್ರಹ್ಮಣ್ಯ
ಸಾವಿರ ಸಾವಿರ ಭಾವಗಳ
ಜೀವವೇ ಆದ ಕಂಠಸಿರಿ

ಸುಮಧುರ ಗಾಯನ
ಅಷ್ಟೇ ಸವಿನಯ ವರ್ತನ
ಸಾಧನೆಗೋ ಒಲಿಯುವ ತವಕ
ಗಾನಕೋಗಿಲೆ ಈ ಗಾಯಕ

ಆಡು ಮುಟ್ಟದ ಸೊಪ್ಪಿಲ್ಲ
ಬಾಲು ಹಾಡದ ಹಾಡಿಲ್ಲ
ಸ್ಪಷ್ಟ ಸರಳ ತನ್ಮಯತೆ
ಅದುವೇ ಈ ಸಾಧಕನ ಗೇಯತೆ

ನೀವು ಎದೆತುಂಬಿ ಹಾಡಿರಲು
ನಾವು ಮನಬಿಚ್ಚಿ ಹಾರಿರಲು
ನಿಮ್ಮ ಗಾನವೇ ಸಾಕು ಇನ್ನೇನು ಬೇಕು
ಈ ಜನ್ಮ ಪಾವನವಾಗಲು

ಬಾಳಬೇಕು ನೂರು ವರ್ಷ
ನಮಗೆ ಹೀಗೆ ನೀಡುತಲಿ ಹರ್ಷ
ಈ ಕಿರಿಯನ ಹರಕೆಯ ಕೂಗಿದು
ಕೋಟಿ ಮನಗಳ ಆಶಯವಿದು

1102ಪಿಎಂ26022016
ಅಮು ಭಾವಜೀವಿ
   

No comments:

Post a Comment