Friday, June 21, 2019

ಕೆಟ್ಟ ಜನರ ದುಷ್ಟ ನಿಲುವು
ಬದಲಾಗಿ ಹೋಗಲಿ ಇಂದು
ಶಿಷ್ಟ ಜನರ ಕಷ್ಟಗಳೆಲ್ಲವೂ
ತೀರಿಹೋಗಲಿ ಇಂದು

ಯುಗದ ಆದಿಯೂ ಜಗದ
ಬದುಕಿಗೆ ಆದರ್ಶವಾಗಲಿ
ಹಳೆಯ ಎಲೆ ಉದುರಿ
ಹೊಸ ಚಿಗುರು ಮೂಡಲಿ

ನೋವುಗಳ ಬೇಗೆ ಕಳೆದು
ನಲಿವಿನ ಹೊಂಗೆ ನೆರಳು ತಂದು
ಬೇವು ಬೆಲ್ಲದ ಸವಿಯನ್ನುಂಡು
ಜಗವು ನಲಿದಾಡಲಿ

ವಿಳಂಬಿಯು ಎಂದು
ವಿಳಂಬ ಮಾಡದೆ
ಜನರ ಆಸೆಗಳನ್ನೆಲ್ಲ
ಕ್ಷಣದಿ ಈಡೇರಿಸಲಿ

ಹೊಸ ಹೂವಿನ ನರುಗಂಪಿನಂತೆ
ಮನಗಳೆಲ್ಲವೂ ಅರಳಲಿ
ದುಂಬಿಬಂದು ಜೇನು ಹೀರಿದಂತೆ
ಸ್ನೇಹ ಬಂಧನ ಚಿರ ಉಳಿಯಲಿ

ಅವಮಾನ ಗಳೆಲ್ಲ ಕಳೆದು
ಅಭಿಮಾನ ತಾನೇ ಮೂಡಿ
ಬಹುಮಾನವಾಗಲಿ ಬದುಕು
ಕಳೆದು ಎಲ್ಲಾ ಕೆಡುಕು

0405ಪಿಎಂ17032018

ಅಮು ಭಾವಜೀವಿ
   
   

No comments:

Post a Comment