Friday, June 21, 2019

ಯಾರು ಹಿತವರು ಇಬ್ಬರೊಳಗೆ ಎಂದು ಕೇಳಿದರೆ ನಮ್ಮ ಪುರುಷ ಪ್ರಧಾನ ಸಮಾಜದಲ್ಲಿ ಮೇಲ್ನೋಟಕ್ಕೆ ಪುರುಷ ಅಂತ ಹೇಳಿದರು ವಾಸ್ತವವಾಗಿ ಈ ಜಗತ್ತಿನಲ್ಲಿ ಸ್ತ್ರೀ ನಿಜವಾದ ಅರ್ಥದಲ್ಲಿ ಸಮರ್ಥಳು ಎನಿಸುತ್ತಿದೆ. ಪುರಾಣ ಸಂಪ್ರದಾಯ ಸಂಸ್ಕೃತಿ ಸಮಾಜ ಎಲ್ಲವೂ ಪುರುಷ ಪ್ರಧಾನ ನೆಲೆಯಲ್ಲಿ ಇರುವುದರಿಂದ ಸ್ತ್ರೀಯನ್ನು ತನ್ನದೇ ಆದ ಪರಿಮಿತಿಯಲ್ಲಿ ಹತ್ತಿಕ್ಕುತ್ತಾ ಬಂದಿದೆ. ಸ್ತ್ರೀಗೆ ಕೇವಲ ಎರಡನೇ ಹಂತಕ್ಕೆ ಸೀಮಿತಗೊಳಿಸಿ ಪುರುಷ ತನ್ನ ಪೌರುಷದ ನೆಲೆಯಲ್ಲಿ ಪ್ರಥಮ ಆದ್ಯತೆಯಾಗಿ ಬೆಳೆಯುತ್ತಾ ಬಂದಿದ್ದರಿಂದ ಸ್ತ್ರೀಯರು ತಲತಲಾಂತರದಿಂದ ಗಂಡಿನ ಅಡಿಯಾಳಾಗಿ ಬಾಳುವಂತಾಗಿದೆ.

No comments:

Post a Comment