* ಸಾಗಿದೆ ಪಯಣ*
ಎಲ್ಲಿಗೆ ಎಂದು ತಿಳಿಯದೆ
ಹೊರಟಿದೆ ಪಯಣ
ಹಾದಿತೆರೆದಿದೆ ಬುದ್ಧಿ ಹೇಳಿದೆ
ದಾರಿ ಸಾಗಿದೆ ಏನು ಕಾರಣ
ಹಿಂದೆ ಗುರುವೂ ಇಲ್ಲ
ಮುಂದೆ ಗುರಿಯೂ ಮೊದಲಿಲ್ಲ
ಮಂದೆಯ ಹಾಗೆ ನಿದ್ರೆ ಮಂಪರಿನಲ್ಲಿ
ವ್ಯರ್ಥ ಸಾಗಿದೆ ಪಯಣ ಅರ್ಥವಿಲ್ಲದೆ
ಸಾಧನೆಗೆ ಬೆಂಬಲವಿಲ್ಲ
ಸಾಧಿಸುವ ಹಂಬಲವು ಇಲ್ಲ
ಬಂದಂತೆ ಬದುಕ ಹೊರಟಿದೆ
ಪಯಣವಂತೂ ಮುಗಿಸದೆ
ಕಾಲಹರಣದ ಈ ಪಯಣ
ಮುಟ್ಟುವುದು ಯಾವ ತಾಣ
ಹಿಂದೆ ನೋಡದೆ ಮುಂದೆ ಓಡಿದೆ
ಅಹಂಕಾರದ ದಹನವಾಗದೆ
ಮುಗಿದೇ ಹೋಯಿತು ಯಾನ
ಕಾಣಲೇ ಇಲ್ಲ ಯಶಸ್ಸನ್ನು
ಹಾದಿ ತಪ್ಪಿದ ಪಯಣವಿದು
ನೆಮ್ಮದಿಯನೆಂದು ತರದು
೧೭೦೨೨೦೧೭
ಅಮುಭಾವಜೀವಿ
No comments:
Post a Comment