Saturday, June 22, 2019

ಅರಳುವ ಮುನ್ನವೇ

Thursday, October 12, 2017

ಮುಂದುವರೆದ ಭಾಗ (ಅರಳುವ ತಾವರೆ) ರವಿ ಅವಳನ್ನು ಸಮಾಧಾನ ಪಡಿಸುತ್ತಿರುವಾಗ ಸವಿತಾಳಿಗೆ ಎಚ್ಚರವಾಯ್ತು. ಎದ್ದು ನೋಡಿದರೆ ಸಮಯ ಆಗಲೆ ಒಂಬತ್ತಾಗಿತ್ತು. ''ಅಯ್ಯೋ ಇಷ್ಟೊತ್ತಿನ ತನಕ ಮಲಗಿಬಿಟ್ಟಿದ್ದೇನಲ್ಲ ಎಚ್ಚರವೇ ಆಗಲಿಲ್ಲ. ಅಮ್ಮ ಏನಂದುಕೊಂಡರೋ"" ಎಂದುಕೊಳ್ಳುತ್ತಾ ರಶ್ಮಿಯನ್ನು ಎತ್ತಿಕೊಂಡು ಹಾಗೆಲ್ಲ ಜೋರಾಗಿ ಓಡಬಾರದು ಏನಾದರೂ ಏಟಾಗಿದ್ದಿದ್ದರೆ ಎಂದು ಅವಳನ್ನು ಎತ್ತಿಕೊಂಡು ಅಡುಗೆ ಮನೆಯತ್ತ ಬಂದು ''ಅಮ್ಮ ಸಾರಿ ಬೆಳಗಾಗಿದ್ದು ಗೊತ್ತಾಗಲೇ ಇಲ್ಲ ತುಂಬಾ ನಿದ್ರೆ ಬಂದು ಎಚ್ಚರ ಇಲ್ಲದ ಹಾಗೆ ಮಲಗಿಬಿಟ್ಟೆ" ಎನ್ನುತ್ತಾ ಬಂದ ಸವಿತಾಳಿಗೆ 'ಅಯ್ಯೋ ಬಿಡಮ್ಮ ಅದಕ್ಕೆಲ್ಲಾ ಸಾರಿ ಏಕೆ ಕೇಳ್ತಿಯಾ ನೀನು ನಮ್ಮ ಮಗಳು ಅಲ್ಲವೇ. ಈ ಕಿತಾಪತಿಗಳು ನಿನ್ನ ನಿದ್ರೆ ಹಾಳುಮಾಡಿದರು 'ಎಂದು ರಶ್ಮಿ ರವಿಯನ್ನು ಬೈಯಲು ಅಮ್ಮ ಅವರನ್ನೇನು ಅನ್ನಬೇಡಿ ಅವರಿನ್ನೂ ಮಕ್ಕಳು. ಎನ್ನುತ್ತಾ ಅಮ್ಮ ಏನಾದರೂ ಕೆಲಸ ಹೇಳಿ ನಾನು ನಿಮಗೆ ಸಹಾಯ ಮಾಡುವೆ ಎಂದಳು ಸವಿತಾ. ಕೆಲಸ ನಾನು ಮಾಡ್ಕೊಳ್ಳುತ್ತೇನೆ ನೀನು ಹೋಗಿ ಸ್ನಾನ ಮಾಡಿಕೊಂಡು ಬಾ ಹೋಗು ಎಂದು ಅವಳನ್ನು ಕಳಿಸಿದಳು. 'ಜಾನಕಿ ಎಂದು ಕೂಗುತ್ತಾ ರಾಮಣ್ಣ ಅಡುಗೆ ಮನೆ ಕಡೆ ಬಂದು "ನೋಡು ನನಗೆ ಗೊತ್ತಿರುವ ಒಬ್ಬರು ಒಂದು ಕಂಪನಿ ನಡೆಸುತ್ತಿದ್ದಾರೆ, ಅಲ್ಲಿ ಒಂದು ಕೆಲಸ ಕೊಡಲು ಒಪ್ಪಿಗೆ ಸೂಚಿಸಿದ್ದಾರೆ ಬೇಗ ಬೇಗ ತಿಂಡಿ ಮಾಡು,ಸವಿತಾಗೂ ಹೊರಡಲು ಹೇಳು ನಾನು ಹಾಗೆ ಹೋಗ್ತಾ ಅವಳನ್ನು ಕರೆದುಕೊಂಡು ಹೋಗಿ ಅಲ್ಲಿ ಎಲ್ಲ ವ್ಯವಸ್ಥೆ ಮಾಡಿ ಬಿಟ್ಟು ನಾನು ಡ್ಯೂಟಿಗೆ ಹೋಗುವೆ'' ಎಂದು ಹೇಳಿ ರಾಮಣ್ಣ ಕೆಲಸಕ್ಕೆ ಹೋಗಲು ತಯಾರಾಗಿ ಬಂದು ಟೇಬಲ್ ಬಳಿ ಕೂತರು.ಸವಿತಾ ಅಷ್ಟೊತ್ತಿಗೆ ಅವಳು ರೆಡಿಯಾಗಿ ಬಂದಳು. ರಾಮಣ್ಣನವರನ್ನು ನೋಡುತ್ತ "ಅಪ್ಪ ನಿಮಗೆ ಹೇಗೆ ಕೃತಜ್ಞತೆ ಹೇಳಲಿ, ನಾನು ಬಂದ ಒಂದೇ ದಿನದಲ್ಲಿ ಕೆಲಸ ಹುಡಿಕಿ ಸಾಯಬೇಕೆಂದಿದ್ದವಳಿಗೆ ಬದುಕುವ ದಾರಿ ತೋರಿದಿರಿ" ಎಂದು ಕೈ ಮುಗಿದಳು. ಅಯ್ಯೋ ಮಗಳೆ ಏನಿದೆಲ್ಲ? ನನ್ನ ಮಕ್ಕಳಿಗೆ ನಾನು ಮಾಡುವುದು ನನ್ನ ಕರ್ತವ್ಯ ಕಣಮ್ಮಾ. ಹೀಗೆಲ್ಲಾ ಕೈ ಮುಗಿಬಾರದು ಎಂದು ಹೇಳಿ ರಾಮಣ್ಣ ಆಕೆಗೆ ಸಾಂತ್ವನ ಹೇಳಿದರು. ನಗರ ಪ್ರತಿಷ್ಠಿತ ಕಂಪನಿಯಲ್ಲಿ ಸವಿತಾಗೆ ಕೆಲಸಕ್ಕೆ ಸೇರಿಸಿ ರಾಮಣ್ಣ ತನ್ನ ಕಛೇರಿಗೆ ತೆರಳಿದರು. ಕಂಪನಿಯಲ್ಲಿ ಹತ್ತಾರು ಜನ ಕೆಲಸ ಮಾಡುತ್ತಿದ್ದರು ಕಂಪನಿಯ ಎಂಡಿ ತನ್ನ ಸಹಾಯಕನನ್ನು ಕರೆದು ಸವಿತಾಳನ್ನು ಪರಿಚಯಿಸಿ ಅವಳು ಕೆಲಸ ಮಾಡಬೇಕಾದ ಜಾಗ ತೋರಿಸಿ ಕೆಲಸದ ಜವಾಬ್ದಾರಿಯನ್ನು ವಿವರಿಸುವಂತೆ ಹೇಳಿ ಕಳಿಸಿದರು. ಅದರಂತೆ ಅವರೊಂದಿಗೆ ಛೇಂಬರ್ನಿಂದ ಹೊರ ಬಂದ ಸವಿತಾಳಿಗೆ ಎಲ್ಲಾ ನೌಕರರನ್ನು ಪರಿಚಯಿಸಿ ಅವಳ ಕೆಲಸದ ಬಗ್ಗೆ ಮಾಹಿತಿ ನೀಡಿ ಅವನು ತನ್ನ ಜಾಗದಲ್ಲಿ ಹೋಗಿ ಕುಳಿತು ಕೆಲಸದಲ್ಲಿ ತೊಡಗಿಕೊಂಡನು. ಸವಿತಾ ಮೊದಲ ದಿನದ ಕೆಲಸಕ್ಕೆ ತನ್ನನ್ನುತಾನು ಅರ್ಪಿಸಿಕೊಂಡಳು.

No comments:

Post a Comment