Friday, June 21, 2019

ಓ ನಲ್ಲೆ ನೀನು
ಸವಿ ಕಬ್ಬಿನ ಜಲ್ಲೆ
ನಿನ್ನಧರಗಳು
ಸಿಹಿ ಜೇನಿನ ತುಣುಕುಗಳು

ನೇರಳೆ ಹಣ್ಣಿನಂತಹ
ಕಣ್ಣಿನವಳೆ ನೀನು
ಮಾವಿನ ಹಣ್ಣಿನಂತಹ
ಮನದವಳು ನೀನು

ನೀನು ಒಮ್ಮೊಮ್ಮೆ ಹುಳಿ ದ್ರಾಕ್ಷಿ
ಮತ್ತೊಮ್ಮೆ ಸವಿಯಾದ ಬಿಳಿ ದ್ರಾಕ್ಷಿ
ನಡೆದಾಡುವ ನಿನ್ನ ನಡುವು
ಬಾಳೆಹಣ್ಣಿನ ತಿರುಳು

ಸೇಬಿನಂತಹ ನಿನ್ನ ಗಲ್ಲ
ಸವಿಯುವ ಅವನೊಬ್ಬನೇ ನಿನ್ನ ನಲ್ಲ
ಮಾತು ಹಲಸಿನ ಒರಟು
ಪ್ರೀತಿ ಅದರೊಳಗಿನ ಸ್ವೀಟು

ಜಗದೊಳಗೆ ನೀನೊಂದು
ಹಣ್ಣಿನ ಅಂಗಡಿ
ನಿನ್ನ ನಾ ನಿತ್ಯ ಹೊಗಳುವೆ
ನೀ ನನ್ನ ಜೀವ ನಾಡಿ

ಅಮು ಭಾವಜೀವಿ

No comments:

Post a Comment