*ಕನಸನ್ನು ಕದಡುವರು*
ಆಸೆಗಳನ್ನು ಕಟ್ಟಿಹಾಕಿ
ಭಾವನೆಗಳ ಮೆಟ್ಟಿನಿಂತು
ನಿರಾಸೆಯ ನೂಪುರದಲ್ಲಿ
ಕನಸನ್ನ ಕದಡುವರು
ಜಗದ ಚೆಲುವಿನ ಕಲ್ಪನೆಯ
ಕನವರಿಕೆಯಲ್ಲಿರುವಾಗ
ಬಿರುಗಾಳಿಯಂದದಿ ಬಂದು
ಕನಸನ್ನ ಕದಡುವರು
ಮುಳ್ಳು ಹಾಸಿನ ಮೇಲೆ
ನಗುವ ಗುಲಾಬಿಯನಿರಿಸಿ
ಮರುಳು ಮಾಡಿ ಕೊನೆಗೆ
ಕನಸನ್ನ ಕದಡುವರು
ನಕ್ಕಂತೆ ನಟಿಸುತ್ತಾ
ನನ್ನ ನರಳಾಟದಲ್ಲಿ
ತಮ್ಮ ಸುಖ ಕಾಣುವವರು
ಕನಸನ್ನ ಕದಡುವರು
ಕದಡಿದ ಕನಸಿನಲ್ಲೂ
ನನಸಾಗೋ ಛಾಯೆ ಇದೆ
ನೋವನ್ನು ಮರೆತು ನಲಿವಿನ
ಜೊತೆ ಕಲೆತು ನಾ ಬಾಳುವೆ
10052ಪಿಎಂ6112002
*ಅಮು ಭಾವಜೀವಿ*
No comments:
Post a Comment