Friday, June 21, 2019

*ಸಾವು ಮೆರೆದ ಅಟ್ಟಹಾಸ*

ಹೃದಯದ ಮಿಡಿಯುತಿದೆ
ವೇದನೆ ಕರುಳ ಕಿವಿಚಿದೆ
ಸಾವು ಮೆರೆದ ಅಟ್ಟಹಾಸ
ಕಿತ್ತುಕೊಂಡಿತು ಎಲ್ಲರ ಸಂತಸ

ಗೂಡು ಸೇರುವ ತವಕದಲ್ಲಿ
ಹತ್ತಿ ಕೂತರು ಬಸ್ಸಿನಲ್ಲಿ
ಕ್ಷಣದ ಹಿಂದೆ ಯಾರಿಗೂ ಗೊತ್ತಿರಲಿಲ್ಲ
ಸಾವು ಬಂದೆರಗಬಹುದೆಂದು

ಹಿರಿಯರು ಕಿರಿಯರೆನ್ನದೆ ಎಲ್ಲರೂ
ಸರಿ ಒಮ್ಮೆಗಾದರೂ ಜಲ ಸಮಾಧಿ
ಆಕ್ರಂದನ ಮುಗಿಲು ಮುಟ್ಟಿ ಕಳೆಯಿತು
ತನ್ನವರ ಕಳೆದುಕೊಂಡ ಸಂಬಂಧಿಕರ ನೆಮ್ಮದಿ

ಕಿತ್ತು ಬರುತ್ತಿದೆ ಕರುಳು
ಓ ಸಾವೇ ನೀನೆಷ್ಟು ಕ್ರೂರವೇ
ನಾಲೆಯ ನೀರೆಲ್ಲ ಕಣ್ಣೀರಾಗಿ
ಸಾವು ತಂದ ಈ ನೋವಿನ್ನು ಶಾಶ್ವತ

ಯಮನು ಗೆದ್ದನಿಂದು
ಮನುಜ ಸೋತನಿಂದು
ಭೀಕರ ಈ ದುರಂತ
ಕಲ್ಲೆದೆಯನು ಕರಗಿಸಿತು

0415ಪಿಎಂ24112018
*ಅಮು ಭಾವಜೀವಿ*
ಚಿತ್ರದುರ್ಗ
   

No comments:

Post a Comment