Saturday, June 22, 2019

*ಅನಿವಾರ್ಯದ ಬದುಕಿಗಾಗಿ*

ಮಲತಾಯಿ ಅವಳು
ನನ್ನ ಕ್ಷಮಿಸುವುದಿಲ್ಲ
ನೀನು ಹೆತ್ತ ತಾಯಿ
ನನ್ನ ಕಷ್ಟ ನೋಡಿ ಸಹಿಸುವುದಿಲ್ಲ

ಅವಳಿಗೆ ಪ್ರೀತಿ ಕಮ್ಮಿ
ಎಲ್ಲವೂ ವ್ಯವಹಾರದ ಬುದ್ಧಿ
ನಿನ್ನ ಪ್ರೀತಿಗೆ ಬೆಲೆಕಟ್ಟಲಾಗದು
ನಿನ್ನ ಜೊತೆಗಿದ್ದರೆ ಬದುಕೇ ನೆಮ್ಮದಿ

ಅವಳು ಎಲ್ಲವನ್ನು
ಕಸಿದುಕೊಳ್ಳುತ್ತಾಳೆ
ನಿನಗೆ ಇಲ್ಲದಿದ್ದರೂ ನೀನು
ನನಗೆ ಎಲ್ಲವನ್ನು ಕೊಡುತ್ತೀಯಾ

ಅವಳೊಂದಿಗಿನ ನಂಟು
ಕೆಲವೇ  ದಿನಗಳು ಮಾತ್ರ
ನಿನ್ನೊಂದಿಗಿನ ನಂಟು
ಸತ್ತು ನಿನ್ನ ಮಡಿಲ ಸೇರುವ ತನಕ

ಅವಳದು ಆಡಂಬರದ ಬದುಕು
ಅದಕ್ಕೆ ಸುಮ್ಮನೆ ಕೂರಲು ಬಿಡಳು
ನಿನ್ನದು ಬಡತನದ ಬೇಗೆಯಾದರೂ
ಹಸಿದಾಗ ತುತ್ತಿಕ್ಕಿ ಮಡಿಲಲ್ಲಿ ಮಲಗಿಸುವೆ

ಅನಿವಾರ್ಯದ ಬದುಕಿಗಾಗಿ
ಅವಳ ಆಶ್ರಯ ಪಡೆದಿರುವೆ
ಅನ್ಯೋನ್ಯವಾಗಿ ಬೆರೆತಿರುವ
ನಿನ್ನೊಂದಿಗೆ ಮತ್ತೆ ಬಂದು ಸೇರುವೆ

0716ಪಿಎಂ13072018

*ಅಮು ಭಾವಜೀವಿ*

No comments:

Post a Comment