Friday, June 21, 2019

*ನೀನೆಲ್ಲಿರುವೆ*

ಹುಣ್ಣಿಮೆಯ ಬೆಳಕಿನಲ್ಲಿ
ತಿಳಿ ಹಾಲ ತೆರೆಗಳಲ್ಲಿ
ಉಕ್ಕುತ್ತಿರುವ ಆಸೆಗಳಲ್ಲಿ
ಒಲವೇ ನಿನ್ನ ನಾ ಹುಡುಕುತ್ತಿರುವೆ

ಇರುಳಲ್ಲು ಭಯದ ನೆರಳಿಲ್ಲ
ಹಗಲಲ್ಲೂ ಬಿಸಿಲ ಬೇಸರವಿಲ್ಲ
ಪ್ರಕೃತಿಯ ಚೆಲುವಲ್ಲಿ ನಿನ್ನಿರುವಿಲ್ಲ
ಒಲವೇ ನೀನೆಲ್ಲಿರುವೇ

ಕಣ್ಣಿಗೆ ಕಾಣದ ನೀನು
ಹೃದಯದೊಡನಾಡಿದ ಮಾತೇನು
ಮನಕೆ ನೋವಾಗುತ್ತಿದೆ
ಒಲಿದು ಸೇರಲಾರೆಯಾ ನನ್ನನ್ನು

ಅರಳುವ ಹೂವು ಪರಿಮಳ
ಸೆಳೆಯಿತು ಮನಸ್ಸನ್ನು ಬಹಳ
ನಿನ್ನಿರುವ ಅದರಲ್ಲಿ ಕಂಡು
ನಾ ಸೇರಿ ಬಂದೆ ದುಂಬಿ ದಂಡು

ಈ ಎದೆಯ ಗೂಡ ಹಾಡು
ಕೇಳಿ ನೀ ಮನಸು ಕೊಡು
ಮರುಗಳಿಗೆ ಜಗ ಮರೆತು
ಜನುಮ ಕಳೆವೆ ನಿನ್ನ ಬೆರೆತು

0900ಪಿಎಂ13042003

*ಅಮು ಭಾವಜೀವಿ*

No comments:

Post a Comment