ಒಂದು ಅಭಿವೃದ್ಧಿಶೀಲ ದೇಶ. ಇಲ್ಲಿನ ಸಮಾಜ , ಸಮುದಾಯದಲ್ಲಿ ತಾತ್ವಿಕ ನೆಲೆಗಟ್ಟಿನ ಸಂಪ್ರದಾಯಗಳ ಸೆಳೆತವಿದೆ. ವರ್ಣಾಶ್ರಮಗಳ ಶ್ರೇಣಿಕೃತ ವರ್ಗ ಸಮಾಜ ನಮ್ಮ ದೇಶದ ಜೀವಾಳ. ಸಂಸ್ಕೃತಿಯ ನೆಲಗಟ್ಟಿಲ್ಲದ ಮೋದಿ ದೇಶದ ಆಶಯಗಳು , ಯೋಜನೆಗಳು ಸಫಲವಾಗಲಾರವು. ಅಂದರೆ ಅಲ್ಲಿನ ಸಂಸ್ಕೃತಿ ಜನರ ಆಶೋತ್ತರಗಳನ್ನು ರೂಪಿಸುವ ಈಡೇರಿಸುವ ಜವಾಬ್ದಾರಿಯನ್ನು ಹೊತ್ತಿರುತ್ತದೆ. ಜೊತೆಗೆ ಪ್ರತಿಯೊಬ್ಬರಲ್ಲೂ ತನ್ನ ನಾಡು-ನುಡಿಯ ಬಗ್ಗೆ ಸದ್ಭಾವನೆ , ಒಗ್ಗಟ್ಟನ್ನು ತರುವ ಏಕೈಕ ಸಾಧನವೇ ಸಂಸ್ಕೃತಿ.
ಇಂದಿನ ಆಧುನಿಕ ಮಾನವನ ಪ್ರಮುಖ ಅವಶ್ಯಕತೆ ಎಂದರೆ ಶಿಕ್ಷಣ ಮಾತ್ರ . ಇಂದು ದೇಶದ ಪ್ರತಿಯೊಬ್ಬ ಪ್ರಜೆ ಸಾಕ್ಷರನಾಗುವ ಅವಶ್ಯಕತೆ ಅಷ್ಟೇ ಪ್ರಮುಖವಾಗಿದೆ. ಕಾರಣ ಸ್ವಾತಂತ್ರ್ಯ ಬಂದು ಎಪ್ಪತ್ತೆರಡು ವರ್ಷಗಳನ್ನು ನಾವು ಕಳೆದಿದ್ದರೂ ಇನ್ನೂ ಅನಕ್ಷರತೆಯ ಕೂಪದಲ್ಲಿರುವುದು ನಾಚಿಕೆಗೇಡಿನ ಸಂಗತಿ. ಸ್ವಾತಂತ್ರ್ಯದಿಂದ ನಮ್ಮಲ್ಲಿ ಸ್ವೇಚ್ಛಾಚಾರ ಮನೆ ಮಾಡಿ ನಾವೆತ್ತ ಸಾಗುತ್ತಿದ್ದೇವೆ ಎನ್ನುವುದನ್ನೇ ಯೋಚಿಸದೇ ಇದ್ದುದರಿಂದಲೇ ದೇಶ ಬಡತನದ ಬೇಗೆಯಲ್ಲಿ ಬೇಯುತ್ತಿದೆ. ನಿರುದ್ಯೋಗದ ಸಮಸ್ಯೆಯನ್ನು ಅನುಭವಿಸುತ್ತಿದೆ. ಇಲ್ಲಿ ಯಾವುದೋ ಒಂದು ವರ್ಗ ಇನ್ನೊಂದು ವರ್ಗವನ್ನು ತುಳಿಯುತ್ತಿದೆ ಎಂಬುದು ನಿಜವಾದರೂ ಅದಕ್ಕೆ ಕಾರಣ ತುಳಿತಕ್ಕೊಳಗಾದವರ ಶೈಕ್ಷಣಿಕ ಪ್ರಗತಿಯ ಗತಿ ಕನಿಷ್ಠ ಮಟ್ಟದಲ್ಲಿರುವುದು. ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕು ಶಿಕ್ಷಣ. ಅದನ್ನು ಪಡೆಯಬೇಕಾದ ವ್ಯಕ್ತಿಗೆ ಅದರ ಬಗ್ಗೆ ಆಸಕ್ತಿ ಇಲ್ಲ. ಒಂದು ವೇಳೆ ಇದ್ದರೂ ಅವನಿಗೆ ನಿತ್ಯ ಬದುಕಿನ ಬವಣೆಗಳ ಸಂಕೋಲೆ ಕಿತ್ತು ಬಂದು ಈ ಹಕ್ಕನ್ನು ಪಡೆದು ಉನ್ನತ ಮಟ್ಟಕ್ಕೇರುವ ಸಾಧ್ಯತೆ ತುಂಬಾ ಕಡಿಮೆಯಾಗಿದೆ. ಶಿಕ್ಷಣದ ಬಗ್ಗೆ ಪ್ರತಿಯೊಬ್ಬ ವ್ಯಕ್ತಿಗೆ ಮಾನಸಿಕ ಸಿದ್ಧತೆ ಬೇಕು ಅದರಿಂದ ಅವನು ಆ ಮಟ್ಟಕ್ಕೆ ತಲುಪುವ ಅವಶ್ಯಕತೆ ಇದೆ . ಸ್ವಾತಂತ್ರ್ಯದಿಂದ ಇಂದಿನವರೆಗೂ ಇನ್ನು ಮುಂದೆಯೂ ಕೂಡ ಯೋಜನೆಗಳು ವೇದಿಕೆಯ ಭಾಷಣಗಳಿಗೆ ಸೀಮಿತವಾಗಿರುವುದರಿಂದ ಕಾರ್ಯಗತವಾಗುವ ಹಂತದ ತೊಡಕು ಗಳಿಂದಾಗಿ ದೇಶ ಬಡತನ, ಅನಕ್ಷರತೆಯಂತಹ ಪಿಡುಗಿನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಬ್ರಿಟಿಷರು ನಮ್ಮನ್ನು ಯಾವ ದೃಷ್ಟಿಯಿಂದ ನೋಡಿದ್ದರೋ ಅದೇ ದೃಷ್ಟಿಯಿಂದ ನಮ್ಮವರೇ ನಮ್ಮನ್ನು ನೋಡುತ್ತಿದ್ದಾರೆ. ನಾನು ಮಾಡುವ ಕೆಲಸದ ಬಗ್ಗೆ ಯಾರು ಚಕಾರ ಎತ್ತಬಾರದು ಎಂದಾದರೆ ಯಾರಿಗೂ ನಾನು ಮಾಡುವ ಕೆಲಸದ ಅರಿವು ಇರಬಾರದು. ನಾನು ಹೇಳಿದ್ದಕ್ಕೆ ತಲೆಯಾಡಿಸುವ ವಾತಾವರಣವನ್ನು ನಾವು ಸೃಷ್ಟಿಸಿದೆ ನಮ್ಮ ಈ ದೌರ್ಬಲ್ಯಗಳ ಮೂಲವಾಗಿದೆ.
ಇಂದು ಶಿಕ್ಷಣ ಯಾರೊಬ್ಬರ ಸೊತ್ತಲ್ಲ. ಪ್ರತಿಯೊಬ್ಬ ಪ್ರಜೆ ಊಟ ಬಟ್ಟೆಗಳಷ್ಟೇ ಅವಶ್ಯಕತೆಯನ್ನು ಶಿಕ್ಷಣಕ್ಕೂ ನೀಡಬೇಕಿದೆ. ಬದುಕಿರುವ ಪ್ರತಿಯೊಬ್ಬ ಮಾನವ ಶಿಕ್ಷಣದ ಗಾಳಿಯನ್ನು ಉಸಿರಾಡಬೇಕಿದೆ. ಅವನು ಅದನ್ನು ಅರಗಿಸಿಕೊಂಡು ತಾನು ತನ್ನ ಮನೆ ಸಮಾಜದಲ್ಲಿ ಸಲ್ಲಬೇಕಾದರೆ ಶಿಕ್ಷಣದಲ್ಲಿ ಅಲ್ಲಿದ್ದರೆ ಮಾತ್ರ ಸಾಧ್ಯ.
ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೆ ನಾವೆಲ್ಲ ವಿಫಲತೆಯ ಹಾದಿಯನ್ನು ತುಳಿದುದರ ಫಲವಾಗಿ ಇಂದು ಸರ್ವ ಶಿಕ್ಷ ಅಭಿಯಾನ ಎಂಬ ಮಹತ್ವಾಕಾಂಕ್ಷೆಯ ಯೋಜನೆಯ ಹುಟ್ಟಿಗೆ ಕಾರಣರಾಗಿದ್ದೇವೆ. ಇಂದು ಭಾರತೀಯ ಪೌರನಾದ ಯಾವ ಮಗುವೂ ಕೂಡ ಶಿಕ್ಷಣದಿಂದ ವಂಚಿತರಾಗಲು ಅವಕಾಶವೇ ಇಲ್ಲ. ಸ್ವತಂತ್ರ ಸಂಗ್ರಾಮದಲ್ಲಿ ಗಾಂಧಿ ಹುಟ್ಟುಹಾಕಿದ ಮಾಡು ಇಲ್ಲ ಮಡಿ ಎಂಬ ಮಾತು ಇಂದು ಶಿಕ್ಷಣದ ಸಾರ್ವತ್ರಿಕರಣ ದಲ್ಲಿ ಕೇಳಿಬರುತ್ತಿದೆ. ಇಲ್ಲಿಯವರೆಗೂ ಸಂಪನ್ಮೂಲಗಳ ಕೊರತೆ ಬಗ್ಗೆ ಸಾಕಷ್ಟು ದೂರುಗಳು ಇದ್ದವು . ಆದರೆ ಇಂದು ಶಾಲೆಯ ಮೂಲಭೂತ ಸೌಲಭ್ಯಗಳಿಗೆ ಯಾವುದೇ ರೀತಿಯಲ್ಲಿ ಕೊರತೆ ಬಾರದಂತೆ ಸರ್ಕಾರ ಸರ್ವ ಶಿಕ್ಷ ಅಭಿಯಾನ ದಲ್ಲಿ ಸಾಕಷ್ಟು ಅನುದಾನಗಳನ್ನು ನೀಡಿ ಸೌಲಭ್ಯಗಳಿಲ್ಲದೆ ಸೊರಗಿದ ಶಿಕ್ಷಣ ವ್ಯವಸ್ಥೆಯನ್ನು ನವ ಚೈತನ್ಯದಿಂದ ಮುನ್ನುಗ್ಗುವಂತೆ ಮಾಡಿದೆ.
ಶಿಕ್ಷಣ ಕೇವಲ ಶಾಲೆ ಮತ್ತು ಶಿಕ್ಷಕರಿಗೆ ಸಂಬಂಧ ಪಟ್ಟ ವಿಷಯವಾಗಿರದೆ ಇಡೀ ಸಮುದಾಯದ ಎಲ್ಲ ಶಾಖೆಗಳ ಆದ್ಯ ಕರ್ತವ್ಯವಾಗಿದೆ ಎಂಬುದು ಜಗಜ್ಜಾಹೀರು ಆಗಿದ್ದೇ ತಡ ಸಮಾಜದ ಸ್ಪಂದನೆಯೂ ಕೂಡ ಹಿಂದೆಂದೂ ಕಂಡಿರದಷ್ಟು ಇತ್ತ ಹರಿದು ಬಂತು. ಇಂದು ಕ್ರಿಯಾಶೀಲ ಶಿಕ್ಷಕರಿಗೆ ಸಾಕಷ್ಟು ಸಂಪನ್ಮೂಲಗಳು ಒದಗಿ ಬರುತ್ತಿವೆ. ಜಡ್ಡುಗಟ್ಟಿದ ವ್ಯವಸ್ಥೆಗೆ ಹೊಸ ಹುರುಪು ಬಂದಿರುವುದು ನಿಜಕ್ಕೂ ಸರ್ವಶಿಕ್ಷ ಅಭಿಯಾನದ ಯಶಸ್ಸಿಗೆ ಮುನ್ನುಡಿ ಬರೆದಿದೆ. ಸಮುದಾಯದ ಪ್ರಾತಿನಿಧಿಕ ಸಂಸ್ಥೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಈ ನಿಟ್ಟಿನಲ್ಲಿ ಬಹಳ ಜವಾಬ್ದಾರಿಯುತ ಕಾರ್ಯ ನಿರ್ವಹಿಸುತ್ತಿದೆ. ಇಂದು ಶಿಕ್ಷಣದ ಪ್ರತಿಯೊಂದು ಆಗುಹೋಗುಗಳ ಬಗ್ಗೆ ಪ್ರತಿಯೊಬ್ಬರಿಗೂ ಕಲ್ಪನೆಯಿದೆ . ಸರ್ಕಾರದ ಯೋಜನೆ ಯಶಸ್ಸಿಗೆ ಪ್ರತಿಯೊಬ್ಬರು ಶ್ರಮಿಸೋಣ ಎಂಬ ಭಾವನೆ ಮೂಡುತ್ತಿರುವುದು ಆಶಾದಾಯಕ.
No comments:
Post a Comment