Saturday, June 22, 2019

ಬದುಕಬೇಕು ನಾನು
ಬರಲು ಸೋಲು ನೋವುಗಳೇನು
ಒಲವಿಗಾಗಿ ಹಂಬಲಿಸಲು ನಾನು
ಕಾರ್ಮುಗಿಲಲ್ಲಿ ಮಿಂಚಾಗಿ ಬಂದೆ ನೀನು

ನಿರಾಸೆಯ ವಿಷವೇರಿ ಬಾಳಿಗೆ
ಭರವಸೆಯನೇ ಕೊಂದಿತ್ತು ನಾಳೆಗೆ
ಮುಳುಗುವ ಈ ಅಣು ಜೀವಿಗೆ
ಹುಲ್ಲುಕಡ್ಡಿಯಾಗಿ ಬಂದೆ ನನ್ನ ಸೇವೆಗೆ

ಹಂಗಿಸುವವರೊಡನೆಲ್ಲ
ಜಂಗಿ ಕುಸ್ತಿಯನಾಡಿಸಿದೆ
ಪ್ರೀತಿಸುವವರೊಡಗೂಡಿಸಿ
ಸ್ಥಿತಿಗತಿಯೇನು ಉತ್ತುಂಗಕ್ಕೇರಿಸಿದೆ

ಒಲವಿನ ಬೀಜವ ಬಿತ್ತಿ
ಬೀಳಿಸಿದೆ ನನ್ನನ್ನು ಹೆಮ್ಮರವಾಗಿ
ನಾ ರೆಂಬೆ-ಕೊಂಬೆ ಚಾಚಿದರು
ಮರೆಯದೆ ನೀ ಜೊತೆಗಿದ್ದೆ ನೆರಳಾಗಿ

ನಾನೆಂಬ ಹೆಮ್ಮೆಯು ನಿನ್ನಿಂದ
ನೀ ತಂದೆ ಬದುಕಿಗೆ ಆನಂದ
ನಿನಗೆಂದೆಂದೂ ಮೀಸಲು ಹೃದಯ ಸಿಂಹಾಸನ
ಅಲ್ಲಿಂದಲೇ ನನಗೆ ಹೇಳಿದರು ಆಶೀರ್ವಚನ

11102014

*ಅಮು ಭಾವಜೀವಿ*
   

No comments:

Post a Comment