ಕಾಡಿ ಕಾಡಿ ನನ್ನ
ಮನವ ಕದಡಿದವಳೇ
ಉದ್ದೇಶವೇನಿತ್ತು ನೀ ನನ್ನ
ಮಾನವ ಮುದುಡಿಸೋ ರಗಳೆ
ಬೇಡವೆಂದರೂ ಕಣ್ಣಿಗೆ ಬಿದ್ದೆ
ಬೇಕಂತಲೇ ನನ್ನ ನಿದ್ದೆಯ ಕದ್ದೆ
ಸುಂದರ ಕನಸು ಕಾಣುವ ಬದಲು
ನೀ ಹಗಲುಗನಸ ಮರೀಚಿಕೆಯಾದೆ
ಹಗಲಿರುಳೆನ್ನದೆ ಹಂಬಲಿಸಿದೆ
ಊಟ ನಿದ್ರೆಯ ಬಿಟ್ಟು ಹಲುಬಿದ
ಪ್ರೀತಿಯ ಹಿಂದೆ ನಾ ನಡೆದೆ
ಬರಿಗಾಲಿವ ಫಕೀರನಂತೆ
ಮನಸ್ಸಿಗೆ ಬಂದವಳು ಹೋದೆ
ನೀ ಹೃದಯವ ಗಾಯಮಾಡಿ
ನನ್ನ ಸಂತೃಪ್ತ ಬದುಕಿನಲ್ಲಿ ನೀ
ಬಂದು ಹೋದೆ ಸುಖವ ಮಾಯಮಾಡಿ
ನನ್ನ ಭರವಸೆಯನ್ನೇ ಹುಸಿ ಮಾಡಿದವಳು
ಪ್ರೀತಿ ಹೆಸರಲ್ಲಿ ಮನವ ಘಾಸಿಗೊಳಿಸಿದವಳು
ಆಸರೆಯ ಹುಲ್ಲುಕಡ್ಡಿ ಎಂದುಕೊಂಡರೆ
ನೇಣಿನ ಕುಣಿಕೆ ಹಾಕಿ ಎಳೆದವಳು
ಏಕೆ ಹೀಗೆ ಮಾಡಿದೆ
ಕಾರಣವೇನೆಂದು ಹೇಳಬಾರದೇ
ನನಗಿದ್ದ ಒಂದೇ ಒಂದು ಬದುಕನ್ನು
ಸರಿ ಮಾಡಿಕೊಳ್ಳಲು ಆಗದಂತೆ ನಾಶಗೈದೆ
*ಅಮು ಭಾವಜೀವಿ*
No comments:
Post a Comment